Wednesday, December 20, 2017

Ondu doseya kathe

         Unlike in the cities, we hardly went to restaurants.  Eating masala dosa in the hotel was like a feast for us. The crispness and the taste lingered in my mouth for that whole evening. From the time I learnt preparing dosa at home, I tried to match the shape..texture..of hotel dosa. I could only imitate their action of sprinkling water on hot tawa and pour the batter and form as many circles as possible.
         Apart from hotel..one of my school friends roopa's mom used to prepare soft dosas. I could only savour a bite or two from her box during our lunch time. Never asked her mom for the recipe.;-)

        Life moved on to bangalore. After few years of PG life, we decided to rent a house instead. Cooking all the meals at first was challenging.  We friends decided to distribute the work. Since we didn't have mixie then, we had very few options for breakfast.  Food world came for our rescue in the form of dosa batter. Abba... we could manage dosa with some gojju or palya. Friends complimented my dosas.

 So I concluded that the food outlets add some secret ingredient to the batter which we don't know.

        After our marriage like a perfect wife I also tried my level best to please him by my whatever culinary skills. I was told by everyone that my hubby is a quality specialist. But still I decided to risk myself by preparing dosa with homemade dosa batter.
I never imagined it to be such a big blunder. It turned out to be "Snow white dosas which were coming out from the tawa by themselves":-)
Though he didn't say anything, dosa bug bit me.
       He told me that he doesn't know the proportions of rice and dal which goes into the batter. But he gave me tips of how the dosa batter looks before and after fermentation.  How it raises when you pour the batter and spread it with laddle. How hot the tawa should be while you pour the batter. Its like masterchef India challenge, you have a dish infront of you, guess the ingredients.  :-)

          I surfed on net, checked with aunties, tried mix and match combinations.  At times got almost perfect dosa,  at times tawa sticking dosa, at times dosa came out by itself.
At one point of time every alternative day I used to soak rice and dal for dosa and wait for the result on tawa.
In the due course I learnt preparing different kinds of dosas..raagi..set..medu...rawa




    Finally one day I got perfect plain dosa.




Got distinction with rank consistently from my husband. :-) ;-)

It took me 4 years to get the perfect one. Learnt a lot about the behaviour of rice, dal, flour , duration of soaking and fermentation, tawa, oil, ghee, butter:-)
Thanks to him. :-) I can butter dosa not him. Only quality can make him happy:-)

Note: If your husband eats one dosa...means it is not good.
If he eats two..means it is ok ok.
If he eats three means it is good.
Above three it is distinction. .rank..whatever is the highest:-):-)


Thursday, October 26, 2017

Ahobila

        ಎಲ್ಲೇಲ್ಲೂ ದೀಪಗಳ ಸಂಭ್ರಮ. ಹಬ್ಬದ ತಯಾರಿಯ ಜೊತೆಗೆ ಎಲ್ಲರೂ ಯಾತ್ರೆಯ ತಾರಾತುರಿಯಲ್ಲೂ ಇದ್ದೆವು. ದೀಪಾವಳಿಯ ಪಾಡ್ಯ ದ ರಾತ್ರಿ ಎಲ್ಲರೂ ನಿಗದಿತ ಸಮಯಕ್ಕೆ ನಿಗದಿತ ಸ್ಥಳಕ್ಕೆ ಬಂದು ಸೇರಿದ್ದೆ ವು. ಕಾಕತಾಳಿಯವೋ ನರಸಿಂಹ ದೇವರ ಶುಭಾಶೀರ್ವಾದವೆಂಬಂತೆ ನಮ್ಮ ರಥ (ಬಸ್) ನ ನಾಮಾಂಕಿತವೂ ಶ್ರೀ ಲಕ್ಷ್ಮೀ ನರಸಿಂಹ ಎಂದಿತ್ತು. ಹರೇ ಶ್ರೀನಿವಾಸ, ಹರಿ ಸರ್ವೋತ್ತಮ ವಾಯು ಜೀವೋತ್ತಮ ಘೋಷಗಳೊಂದಿಗೆ ನಮ್ಮ ಪ್ರಯಾಣ ಪ್ರಾರಂಭವಾಯಿತು. ಗುಂಪಿನಲ್ಲಿ ಮಧ್ವೇಶ್ ಮಾಮಾ ದಂಪತಿಗಳನ್ನು ಹೊರತುಪಡಿಸಿ ಮಿಕ್ಕವರೆಲ್ಲರಿಗೂ ಇದು ಅಹೋಬಲದ  ಮೊದಲ ಯಾತ್ರೆಯಾಗಿತ್ತು. ಕೇಳಿ ತಿಳಿದುಕೊಂಡ ಮಾಹಿತಿಯ ಹೊರತು ನವ ನರಸಿಂಹ ಇರುವ ಕ್ಷೇತ್ರಗಳ ಕುರಿತು ನಮ್ಮೆಲ್ಲರ ಮನಸ್ಸಿನಲ್ಲಿದ್ದಿದ್ದು  ಒಂದು ಪ್ರಾಮಾಣಿಕ ಭಕ್ತಿ ಹಾಗು ಕೌತುಕ ಅಷ್ಟೇ.
              ಅಹೋಬಲ ತಲುಪುವ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಿಗದಿತ ತಂಗುದಾಣಕ್ಕೆ ಸುರಕ್ಷಿತವಾಗಿ ತಲುಪಿದೆವು. ಇಲ್ಲಿಂದ ಶುರುವಾಯ್ತು ನೋಡಿ ಅಚ್ಚರಿಗಳ ಸರಮಾಲೆ. ನಮ್ಮ ಸ್ವಾಗತಕ್ಕೆ ವಾನರ ಸೈನ್ಯವೇ ನಿಂತಿತ್ತು. ಅದರಲ್ಲೂ ಒಂದು ಮಂಗಣ್ಣ ನಮ್ಮ ಉಂಡಿ ಚೀಲವನ್ನು ತೆಗೆದುಕೊಂಡು ತಾನು ಸವಿದು ತನ್ನ ಬಾಂಧವರೆಲ್ಲರಿಗೂ ಹಂಚಿತು. ಎಲ್ಲರೂ ಎದ್ದೆವೋ ಬಿದ್ದೆವೋ ಎನ್ನುತ್ತ ನಮ್ಮ ಕೊಠಡಿಯೊಳಗೆ ಸೇರಿಕೊಂಡೆವು. ಎಲ್ಲರೂ ಬೆಳಗಿನ ಆಹ್ನಿಕಗಳನ್ನು ಮುಗಿಸಿ ತಿಂಡಿ ತಿಂದು ಯಾತ್ರೆಗೆ ಸಜ್ಜಾದೆವು.

             ಪ್ರಪ್ರಥಮವಾಗಿ ದಿಗುಲ ಅಹೋಬಲ ನರಸಿಂಹ ದೇವರ ದರ್ಶನ ಪಡೆಯಲು ಮುಂದಾದೆವು. ಶ್ರೀನಿವಾಸನು ತನ್ನ ವಿವಾಹ ಕಾಲದಲ್ಲಿ ತಾನೇ ಸ್ವಯಂ ಈ ಕ್ಷೇತ್ರದಲ್ಲಿ ನರಸಿಂಹ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಕೈಂಕರ್ಯಗಳನ್ನು ಮಾಡಿದನೆಂದು ಪ್ರತೀತಿ. ಅದೇ ದೇವಾಲಯದ ಒಂದು ಭಾಗದಲ್ಲಿ ಕಲ್ಯಾಣ ವೆಂಕಟರಮಣ ಸ್ವಾಮಿಯ ದೇಗುಲವಿರುವುದು ಅದಕ್ಕೆ ಸಾಕ್ಷಿ ಎಂಬಂತಿದೆ. ದೇವಾಲಯದ ಆವರಣದಲ್ಲಿ ಇರುವ ಬ್ರಹತ್ ಶಿಲಾ ಖಂಬಗಳು ಶ್ರೀನಿವಾಸನ ಕಲ್ಯಾಣೋತ್ಸವಕ್ಕೆ ಹಿಡಿದ ಕನ್ನಡಿಯಂತಿವೆ. ಹಿಂದಿನ ವೃತ್ತಾಂತವನ್ನು ನೆನೆಯುತ್ತ ದೇವರ ದರ್ಶನ ಮಾಡಿದಾಗ ನಮ್ಮಲ್ಲಿ ಏನೋ ಕಂಡರಿಯದ ಒಂದು ಪುಳಕ. ಜನ್ಮ ಸಾರ್ಥಕವಾಯಿತೆಂಬ ಭಾವ.
              ಇಲ್ಲಿಂದ ಸರಿ ಸುಮಾರು ೨೦ಕಿ. ಮೀ ದೂರದಲ್ಲಿ "ಪಾವನ ನರಸಿಂಹ" ಸನ್ನಿಧಿಯಿದೆ. ಅಲ್ಲಿಗೆ ತಲುಪಲು ನಾವೆಲ್ಲರೂ ೪ ಜೀಪ್ ಗಳ ನೆರವು ಪಡೆದೆವು. ಬಹುಶಃ ಇಂತಹ ದುರ್ಗಮ ದಾರಿಯಲ್ಲಿ ಪ್ರಯಾಣ ಈ ಹಿಂದೆ ಮಾಡಿರಲಿಕ್ಕಿಲ್ಲ. ಆ ಪ್ರಕೃತಿಯ   ಸವಾಲಿಗೆ ಎದೆ ಒಡ್ಡಿ ನಿಲ್ಲುವ ಧೀರ ಚಾಲಕರನ್ನು ನೋಡಿರಲಿಕ್ಕಿಲ್ಲ. ಯಾವ wonderla rides ಗಳು ಈ ದಾರಿಯ ಮುಂದೆ ನಾಚಿ ನೀರಾಗಬೇಕು. ಒಂದರ ಹಿಂದೆ ಒಂದು dry or water rides. Hmm water rides ಅನ್ನೋದಕ್ಕಿಂತ ಅನಿರುದ್ಧ ಹೇಳಿದಂತೆ ಅದು chocolate sauce ride.  ಗಾಡಿ ಯಾವ ANGLE ನಲ್ಲಾದರೂ ವಾಲಬಹುದು. ಅದರ  ಮುನ್ಸೂಚನೆ    ಚಾಲಕನಿಗೂ ಇಲ್ಲ... ನಮಗಂತೂ ಇಲ್ಲವೇ ಇಲ್ಲ.  ಹೀಗಿತ್ತು ನಮ್ಮ NH ೧(ನರಸಿಂಹ HOLY ಪಥ). ನಮ್ಮನ್ನು ಸುರಕ್ಷಿತವಾಗಿಟ್ಟ ಭಗವಂತನ ಕೃಪೆಗೆ ಹಾಗೂ ಆ ಚಾಲಕರ ಚಾಕುಚಕ್ಯತೆಗೆ ತಲೆದೂಗುವುದೊಂದೇ ನಮಗೆ ಉಳಿದದ್ದು. ನಮ್ಮ ಪಾಪಗಳನ್ನೆಲ್ಲ ಕಳೆಯಲು ಅವತರಿಸಿರುವ ಆ ನರಸಿಂಹ ಸ್ವರೂಪದ ದರ್ಶನ ಮಾತ್ರಕ್ಕೆ ನಾವು ಇಷ್ಟಾದರೂ ಕಷ್ಟ ಪಡದಿದ್ದರೆ ಹೇಗೆ ?ಮನಸ್ಸು ದೇವರ ಕರುಣೆಗೆ ಶರಣಾಯಿತು.

             ಅಲ್ಲಿಂದ ಮುಂದೆ " ಭಾರ್ಗವ ನರಸಿಂಹ" ದೇವರ ದರುಶನಕ್ಕೆ ಹೊರಟೆವು. ಪರುಶುರಾಮದೇವರು ನರಸಿಂಹ ಅವತಾರದ ದರ್ಶನ ಮಾಡಲಪೇಕ್ಷಿಸಿದಾಗ ನರಸಿಂಹ ದೇವರು ಅವತರಿಸಿದ ಕ್ಷೇತ್ರವಿದು. ತುಸು ಕಾಲುದಾರಿಯ ಪ್ರಯಾಣ.. ಸುಮಾರು ನೂರು ಮೆಟ್ಟಿಲುಗಳನ್ನು ಏರಿ ದೇವರ ದರ್ಶನ ಪಡೆದೆವು.. 
                ಆಗಲೇ ಊಟದ ಸಮಯ ಮೀರಿ ಹೋಗಿತ್ತು. "ಹಸಿದ ಹಾರವನನ್ನು  ಕೆಣಕಬಾರದು" ಎಂಬಂತೆ ಯಾವುದೇ ಸದ್ದು  ಗದ್ದಲವಿಲ್ಲದೆ ಎಲ್ಲರೂ  ತಂಗುದಾಣದ ಊಟದ ಕೊಠಡಿಯಲ್ಲಿ ಕುಳಿತೆವು. ಶೀಘ್ರವಾಗಿ ಭೋಜನವನ್ನು ಮುಗಿಸಿ ಕೊಂಚ ವಿರಾಮದ ಬಳಿಕ ಇನ್ನೆರೆಡು ನರಸಿಂಹ ದೇವರ ದರ್ಶನಕ್ಕೆ ತೆರಳಿದೆವು . 
                ವಟವೃಕ್ಷದ ಕೆಳಗೆ ಅವತರಿಸಿರುವ " ಛತ್ರವಟ ನರಸಿಂಹ". ಸಂಗೀತಪ್ರಿಯನಾದ ಈ ನಾರಸಿಂಹನು ಹಾಹಾ ಹುಹು ಎಂಬ ಗಂಧರ್ವರ ಗಾನಕ್ಕೆ ಒಲಿದು ತಾಳ ಹಾಕುತ್ತಿರುವ ಭಂಗಿಯಲ್ಲಿ ಕುಳಿತಿರುವನೆಂದು ಪ್ರತೀತಿ. 
                 ನಂತರ " ಯೋಗಾನಂದ ನರಸಿಂಹ" ನ ದರ್ಶನ ಪಡೆದೆವು . ನರಸಿಂಹನು ಸ್ವಯಂ ಪ್ರಹ್ಲಾದನಿಗೆ ಯೋಗಾಸನವನ್ನು ಹೇಳಿಕೊಟ್ಟ ಸ್ವರೂಪವಿದು. ದೇವರು ಯೋಗಮುದ್ರೆಯಲ್ಲಿ ಮಂದಸ್ಮಿತನಾಗಿ ಅವತರಿಸಿರುವನು. ಅಲ್ಲಿಂದ ಹೊರಟು ದಿಗುಲ ನರಸಿಂಹನ ದರ್ಶನವನ್ನು ಪುನಃ ಪಡೆದು...ರಾತ್ರಿಯ ಊಟದ ಶಾಸ್ತ್ರವನ್ನು ಮುಗಿಸಿ ಮರುದಿನದ ಪ್ರಯಾಣಕ್ಕೆ ಸಜ್ಜಾಗಲು ಬೇಗನೆ ನಿದ್ರಾದೇವಿಗೆ ಶರಣಾದೆವು. 
                   NH ೧ ನ ಅನುಭವದ ನಂತರ NH2 ಪ್ರಯಾಣಕ್ಕೆ ಎಲ್ಲರು ಮಾನಸಿಕವಾಗಿ ಹಾಗು ದೈಹಿಕವಾಗಿ ಸಜ್ಜಾಗಿದ್ದೇವು. ಇವತ್ತಿನ ಯಾತ್ರೆಗೆ ಅವರವರ ಕೈ ಕಾಲುಗಳೇ
ಅವರವರ ಸಾರಥಿ. ವಾಹನ ದ್ವಿಚಕ್ರವೋ .....ಮೂರು ಚಕ್ರದ್ದೋ ... ನಾಲ್ಕು ಚಕ್ರದ್ದೋ ಎನ್ನುವ ಆಯ್ಕೆ ನಮ್ಮದಾಗಿತ್ತು.;)
               ಬೆಟ್ಟದ ಕೆಳಗಿನ ಅಹೋಬಿಲ ನರಸಿಂಹ ದೇಗುಲದ ಬಳಿಯಿಂದ ಪ್ರಾರಂಭವಾಯ್ತು ನಮ್ಮ ಪ್ರಯಾಣ.


ತಂಪಾದ ವಾತಾವರಣ.. ಭವನಾಶಿನಿ ನದಿಯ ಝುಳು ಝುಳು ನಿನಾದ...ಮಧ್ಯೆ ಮಧ್ಯೆ ಎಲ್ಲರ ಮಾತಿನ ಚಟಾಕಿಗಳು....ಪ್ರಕೃತಿಯ ವಿಸ್ಮಯವನ್ನು ಆಸ್ವಾದಿಸುತ್ತ ನಡೆದೆವು. ಭವನಾಶಿನಿಯ ನೀರು ನಮ್ಮ ಪಾದಗಳಿಗೆ ಸೋಕಿದಾಗ ಹಿಂದಿನ ದಿನದ ಆಯಾಸವೆಲ್ಲಾ ಮಂಗ ಮಾಯಾ. ಗುಂಪಿನಲ್ಲಿ ಎಲ್ಲಾ ವಯೋಮಾನದವರೂ ಇದ್ದರು. ಎಲ್ಲರೂ ತಮ್ಮ ಸಾಮರ್ಥ್ಯ ಹಾಗೂ ಶಕ್ತಿಗನುಗುಣವಾಗಿ ತಮ್ಮ ತಮ್ಮ ವೇಗದಲ್ಲಿ ಬೆಟ್ಟ ಹತ್ತಿದೇವು. ಕಿರಿದಾದ ಕಾಲುದಾರಿ,‌ ಈಗಲೋ ಆಗಲೋ ಬಿದ್ದೆವೋ ಎನ್ನುವಂತೆ ಒಂದರ ಮೇಲೊಂದು ನಿಂತಿರುವ ಕಲ್ಲುಗಳು..ಅವುಗಳಿಗೆ ಅನೂಕೂಲವಾಗುವಂತೆ ನಾವು ನಡೆಯಬೇಕು. ನಮ್ಮಿಂದ ಒಂದು ಕಲ್ಲು ಜರೀದರೂ ಅದು ಉರುಳುವ ಪರಿಯನ್ನು ನೋಡಿದರ್ ಎದೆ ಝಲ್ಲೆನ್ನುತ್ತಿತ್ತು. ನಮ್ಮ ಹಿಂದೆ ಇರುವವರಿಗೆ ತಗಲಿದರೇ ಏನು ಗತಿ..phew...


       ಉಗ್ರಸ್ಥಂಭದ ಧ್ವಜ ಕಾಣುತ್ತಿದ್ದಂತೆ ಬಸವಳಿದಿದ್ದ ಜೀವಗಳು ಮತ್ತೆ ಚಿಗರಿದವು. ಭಗವಂತ ನರಸಿಂಹ ರೂಪದಿಂದ ಹೊರಬಂದ ಸ್ಥಂಬವದು. ಈ ವರೆಗೂ ನಮ್ಮಲ್ಲಿ ಬಹುಶಃ ಎಲ್ಲರ ಕಲ್ಪನೆಯಲ್ಲಿ ಇದ್ದಿದ್ದು ನಮ್ಮ ರಾಜಕುಮಾರ ನಟಿಸಿದ "ಭಕ್ತ ಪ್ರಹ್ಲಾದ" ಚಿತ್ರದ ಅರಮನೆ..ಖಂಬ..ಆದರೆ ವಾಸ್ತವವಾಗಿ ಹಿರಣ್ಯಕಶ್ಯಪುವಿನ ಅರಮನೆ ಅಂದರೆ ಇಡಿ ಆ ಕಾಡಿನ ಪ್ರದೇಶ. ಸ್ಥಂಬ ಎನ್ನುವುದು ಆ ಒಂದು ಬೆಟ್ಟವೇ. ಇದರ ಕಲ್ಪನೆ ಯಾವ ನಿರ್ದೇಶಕನ ಊಹೆಗೂ ಮೀರಿದ್ದು. ಆ ಉಗ್ರಸ್ಥಂಬದ ಮೇಲಂಚಿನಲ್ಲಿ ದೇವರ ಅವತರಿಸಿರುವ ಕುರುಹಾಗಿ ಪಾದಗಳನ್ನು ಪ್ರತಿಷ್ಟಾಪನೆ ಮಾಡಿದ್ದಾರೆ. ಸುತ್ತಲು ಪರ್ವತಗಳ ಬೃಹತ್ ಸಾಲು, ಸ್ಥಂಬದ ಕೆಳಗೆ ಎವೆ ಇಕ್ಕದೆ ನೋಡಿದರೂ ಕಾಣದ ಭೂಮಿ...ದಟ್ಟ ಕಾಡು....ಒಂದು ಕಡೆ ಮೈ ನವಿರೇಳಿಸುವ ಭಗವಂತ ಅವತಾರವೆತ್ತ ಸನ್ನಿವೇಶ...ಇನ್ನೊಂದು ಕಡೆ ಜೀವಕ್ಕೆ ಸವಾಲೊಡ್ಡುವ ಪ್ರಕೃತಿಯ ವಿಸ್ಮಯ....phew...ಬಣ್ಣಿಸಲಸದಳ..
"ಭಗವಂತನ ಕರುಣೆಗೆ ಎಣೆ ಇಲ್ಲ" ಎಂಬುವುದಕ್ಕೆ ನಾವೆಲ್ಲರೂ ಸುರಕ್ಷಿತವಾಗಿ ಮೇಲೆ ತಲುಪಿ...ಪ್ರದಕ್ಷಿಣೆ ನಮಸ್ಕಾರ ಹಾಕಿ...ಪುರುಷರೆಲ್ಲಾ ಮನ್ಯುಸುಕ್ತ ಪುರಶ್ಚರಣ..ಪೂಜಾ ಕೈಂಕರ್ಯಗಳನ್ನು ಮಾಡಿದ್ದು..ಜನ್ಮ ಸಾರ್ಥಕವಾಯಿತು.
         ಗುರುತ್ವಾಕರ್ಷಣ ಶಕ್ತಿ ಗೆ ವಿರುದ್ಧವಾಗಿ ನಡೆಯುವುದು ಒಂದು ತೆರನಾದರೆ...ಮರಳುವುದು ಇನ್ನೊಂದು ತೆರ..ಅಲ್ಲಿಂದ ಕೆಳಗಿನವರೆಗೆ ಒಂದು ಜಾರುಬಂಡೆ ಇದ್ದಿದ್ದರೆ...ಎಂದು ಅಂದುಕೊಂಡವರಲ್ಲಿ ನಾವೂ ಒಬ್ಬರು. ನೀರಿನ ಝುಳು ಝುಳು ನಾದ ಕಿವಿಗೆ ಬಿದ್ದದ್ದೆ..ಎಲ್ಲಿಲ್ಲದ ಸಮಾಧಾನ..ಅಬ್ಬಾ!ನೀರಿನ ದಾಹ ತೀರಿದಷ್ಟು ಸಂತೋಷ. ೭೫ ರ young man ವಾಮಣ್ಣಜ್ಜಾ ಅವರು ನಿರಾಯಾಸವಾಗಿ ಬೆಟ್ಟ ಹತ್ತಿ ಇಳಿದಿದ್ದು ನಿಜಕ್ಕೂ ಶ್ಲಾಘನೀಯ...೬೯ ರ ಜಯರಾಮ್ ಮಾಮಾ..ಶರವೇಗದಲ್ಲಿ ಬೆಟ್ಟ ಹತ್ತಿ ಇಳಿಯುವ ಮಧ್ವೇಶ್ ಮಾಮಾ...ಇವರೆಲ್ಲರ ಮನೋಸ್ಥೈರ್ಯಕ್ಕೆ hats off...
          ನಾವ್ಯಾರೂ "ಬಚೇಂದ್ರಿ ಪಾಲ್" ಅಲ್ಲದಿದ್ದರೂ ನರಸಿಂಹ ದೇವರ ಕೃಪೆಯಿಂದ ನಿರ್ವಿಘ್ನವಾಗಿ ಉಗ್ರಸ್ಥಂಬ ಏರಿದ್ದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಸಂಗತಿಯೇ ಸರಿ...
"ಅಹೋಬಲದಲ್ಲಿ ಬಾಹುಬಲ" ದ ಪರೀಕ್ಷೆ ನೀಡಿದ ನಮ್ಮ ಯಜಮಾನ ರಿಗೆ ತ್ರಿವಿಕ್ರಮನನ್ನ ಎತ್ತಿಕೊಳ್ಳುವಲ್ಲಿ ಕೈ ಜೋಡಿಸಿದ ಎಲ್ಲರಿಗೂ ‌ನಮ್ಮ ಧನ್ಯವಾದಗಳು.



            ಕೆಳಗಿಳಿದು ತುಂತುರು ಮಳೆಯಂತೆ ಭಾಸವಾಗುವ ಝರಿಯ ಒಡಲಿನಿಂದ ಹಾಯ್ದು "ಜ್ವಾಲಾ ನರಸಿಂಹ"ನ ದರ್ಶನಕ್ಕೆ ಮುಂದಾದೆವು. ತುಂತುರು ನೀರ ಹನಿಗಳು ಬಿಸಿಲಿನ ಬೆಗೆ ಇಂದ ಆದ ಆಯಾಸವನ್ನೂ ಬಾಯಾರಿಕೆಯನ್ನೂ ತಣಿಸಿದವು.



ಹಿರಣ್ಯಕಶ್ಯಪುವಿನ ಸಂಹಾರಕ್ಕೆ ಜ್ವಾಲಾಮುಖಿಯಂತೆ ಅವತರಿಸಿದ ಭಗವಂತ ಆತನ ಕರಳ ಬಗೆದು ಅದನ್ನು ತನ್ನ ಕೊರಳಿಗೆ ಹಾರವಾಗಿಸಿಕೊಂಡ ಸ್ಥಳವದು. ಗುಡಿಯಲ್ಲಿ ಮೂಲ ರೂಪದೊಂದಿದೆ ಬಲಭಾಗದಲ್ಲಿ ಆ ರೂಪವನ್ನು ನೋಡುತ್ತಾ ಕೈ ಮುಗಿದು ನಿಂತ ಪ್ರಹ್ಲಾದನ ಮೂರ್ತಿ, ಅಸುರನ ಜುಟ್ಟು ಹಿಡಿದಿರುವ ನರಸಿಂಹ ನ ಮೂರ್ತಿ, ತದನಂತರ ಅಸುರನಿಗೆ ಮುಕ್ತಿ ನೀಡಿ ತನ್ನಲಿ ಐಕ್ಯ ಮಾಡಿಕೊಂಡ ವಿಷ್ಣುವಿನ ಮೂರ್ತಿಯು ಇದೆ. ಪಕ್ಕದಲ್ಲೇ ರಕ್ತ ಕುಂಡವಿದೆ. ಅಸುರನನ್ನ ಸಂಹರಿಸಿ ಭಗವಂತ ತನ್ನ ರಕ್ತಸಿಕ್ತ ಕೈಗಳನ್ನು ಅಲ್ಲಿ ತೊಳೆದುಕೊಂಡನೆಂದು ಪ್ರತೀತಿ. ಅದಕ್ಕೆ ಪೂರಕವೆಂಬಂತೆ ಕುಂಡದ ನೀರು ನೆತ್ತರು ವರ್ಣವನ್ನು ಹೊಂದಿದೆ.

       ಎಲ್ಲರೂ ಯಾತ್ರೆಗೆ ತಕ್ಕ ಲಘು ಉಪಹಾರವನ್ನು ವಾನರ ಸೈನ್ಯದಿಂದ ಕಣ್ಮರೆಯಾಗಿ  ಅಲ್ಲೇ ಮುಗಿಸಿದೇವು. ವಾನರ ಸೈನ್ಯ ಇಲ್ಲಿ ಸಾಮಾನ್ಯದಲ್ಲ. ಇದರ ಅನುಭವ ಸ್ನೇಹಾಳಿಗೆ ಕೇಳಿ ತಿಳಿಯಬೇಕು. :) ತಮ್ಮ ಪ್ರಭುವಿನ ಸೇವೆಗೆ ಸದಾ ಸಿದ್ಧರಿರುವಂತೆ ಅಹೋಬಿಲದ ಉದ್ದಗಲಕ್ಕೂ ವಾನರ ಸೈನ್ಯ ಹರಡಿದೆ.

          ಅಲ್ಲಿಂದ "ಮಾಲೋಲ ನರಸಿಂಹ" ನ ದರ್ಶನಕ್ಕೆ ಹೊರಟೆವು. ಹಿರಣ್ಯಕಶ್ಯಪುವಿನ
 ಸಂಹಾರದ ನಂತರ ಉಗ್ರ ರೂಪದ ಭಗವಂತನನ್ನು ಲಕ್ಷ್ಮೀದೇವಿ ಶಾಂತಪಡಿಸಿದಳೆಂದು ಪ್ರತೀತಿ. ಇಲ್ಲಿ "ಮಾ-ಲಕ್ಷ್ಮೀ" ಲೋಲ ನಾಗಿ   ನೆಲಸಿದ್ದಾನೆ.
         
          ಅಲ್ಲಿಂದ ಕೆಳಗಿಳಿದು "ವರಾಹ ನರಸಿಂಹ"(ಕ್ರೋಢಾ ನರಸಿಂಹ )ನ ದರ್ಶನ ಪಡೆದೆವು. ವರಾಹ ಸ್ವರೂಪನಾಗಿ ಎಡ ಭುಜದ ಮೇಲೆ ಲಕ್ಷ್ಮೀ ದೇವಿಯನ್ನು ಕೂಡಿಸಿಕೊಂಡಿರುವ ಭಂಗಿಯಲ್ಲಿದ್ದಾನೆ.    ಅಲ್ಲೇ ಮುಂದೆ ಹರಿಯುವ ನದಿ ಕೆಂಪು ವರ್ಣದಲ್ಲಿ ಗೋಚರಿಸುತ್ತದೆ, ಮೇಲೆ ರಕ್ತಕುಂಡದಿಂದ ನೀರು ಇಲ್ಲಿ ಹರಿದು ಬರುತ್ತಿರುವಂತೆ ಭಾಸವಾಗುತ್ತದೆ.        
           
          ಕೆಳಗಿನ ಅಹೋಬಿಲದ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆದಿರುವುದರಿಂದ ಕೇವಲ ಉತ್ಸವ ಮೂರ್ತಿಯ ದರುಶನ ಮಾತ್ರದಿಂದ ತೃಪ್ತರಾಗಬೇಕಾಯಿತು. "ನವ ನಾರಸಿಂಹ " ಕ್ಷೇತ್ರಗಳಲ್ಲಿ ಇದೇ ಮೊದಲನೆಯದಾಗಿದ್ದು ಭಗವಂತ ಉಗ್ರರೂಪದಲ್ಲಿ ಅವತರಿಸಿರುವನು.

          ಕೊನೆಯದಾಗಿ "ಕಾರಂಜಾ ನರಸಿಂಹ ". ಭಗವಂತ ಆಂಜನೇಯನಿಗೆ ತನ್ನ ದಶಾವತಾರಗಳನ್ನೂ ಇಲ್ಲಿ ತೋರಿಸಿರುವನೆಂದು ಪ್ರತೀತಿ. ಅದಕ್ಕೆ ಕುರುಹಾಗಿ ರಾಮನ ಧನಸ್ಸು, ಕೃಷ್ಣನ ಚಕ್ರ, ತಲೆ ಮೇಲೆ ಶೇಷದೇವರನ್ನು ಕಾಣಬಹುದು.

            ಹೀಗೆ ಎರಡು ದಿನಗಳ ಕಾಲಾವಧಿಯಲ್ಲಿ ನವ ನಾರಸಿಂಹ ಕ್ಷೇತ್ರದ ದಿವ್ಯ ಯಾತ್ರೆಯನ್ನು ಭವ್ಯವಾಗಿ ಮಾಡಿದೆವು. ಭಗವಂತ ಇಂತಹ ಘೋರಾರಣ್ಯದಲ್ಲಿ ಯಾಕೆ ನೆಲೆಸಿರುವನೆಂದು ನಮ್ಮಲ್ಲಿ ಸಂದೇಹ ಬಂದಿದ್ದುಂಟು. "ಸಿಂಹಕ್ಕೆ ಯೋಗ್ಯವಾದ" ಸ್ಥಳದಲ್ಲೇ ಅವನು ನೆಲೆಸಿರುವನು ಎನ್ನುವುದು ಅತಿ  ಸಾಮಾನ್ಯ ವಿವರಣೆಯಾದರೂ ಸರ್ವತ್ರವ್ಯಾಪ್ತನಾದ ಭಗವಂತನಿಗೆ ಯಾವ ಅರಣ್ಯ ಯಾವ ನಗರ :)

         ಸ್ವಯಂಭೂ ನರಸಿಂಹ ದೇವಾಲಯಗಳನ್ನು ದರ್ಶಿಸಿ ಜೀವ ಧನ್ಯವಾಯಿತು. ಈ ಲೇಖನದ ಪ್ರತಿಯೊಂದು ಪದ ಬರೆಯುವಾಗಲೂ ನಮ್ಮ ಯಾತ್ರೆಯ ಕ್ಷಣಗಳು ಮರುಕಳಿಸಿದಂತೆ ಆದವು. ಅದಕ್ಕೆ ಲೇಖನದ ಉದ್ದ ನನ್ನ ಕೈ ಮೀರಿದೆ. :)

       ಯಾತ್ರೆಯನ್ನು ಸುರಳಿತವಾಗಿ, ಸುಸೌಕರ್ಯವಾಗಿ ನೆರವೇರಿಸಿದ ಮಧ್ವೆಶ್ ಮಾಮಾ , ಸುರೇಶ್ ಮಾಮಾ ಹಾಗು ರಮೇಶ್ ಮಾಮಾ ರಿಗೆ ನಮ್ಮೆಲ್ಲರ ಅನಂತ ಧನ್ಯವಾದಗಳು.

ಹೀಗೆ ನೀವು ನಿಮ್ಮ ಅನುಭವದಿಂದ ನಮಗೆ ಹೊಸ ಹೊಸ ಯಾತ್ರೆಗಳನ್ನು ಮಾಡಿಸುತ್ತ ನಿಮ್ಮ ಪುಣ್ಯದೊಂದಿಗೆ ಕೊಂಚ ನಮ್ಮ ಪುಣ್ಯಾನೂ ವೃದ್ಧಿಸುತ್ತಿರಿ .. :)

 ಬರಹದಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ಸ್ ತುಂಬಾ   ಆಗಿರಬಹುದು .. ಮಾಹಿತಿಯ್ಲಲೂ ಏನಾದರೂ ಚ್ಯುತಿಯಾಗಿದ್ದಲ್ಲಿ ಈ ಕಿರಿಯಳಲ್ಲಿ ತಮ್ಮ ಕ್ಷಮೆಯಿರಲಿ.

                                             "ನಾಹಂ ಕರ್ತಾ ಹರಿಃ ಕರ್ತಾ" 
         




        
                 
         

Tuesday, May 30, 2017

Pani puri

     A small ball shaped puffed puri, with chatpata flavoured potato stuffing and tangy, spicy and sweet pani..when enters our mouth..hmmm...yummy...all kinds of flavours ponder in our mouth... I know your mouth is craving for it now :-)
      Bangalore is the city which introduced me to these street chats. Out of which panipuri had always left me with a aww! Feeling. Simple from the look..but cater to a wide variety of flavours.  Going by the looks of it..I tried my hands on panipuri. Phew..it was a disaster. Puris were drowned in pani. :( probably certain dishes are best prepared by experts.
          I never had the courage to test my culinary skills again on this "Indian wonder " untill last year. Thanks to my husband who loves everything homemade. Phew..I couldn't believe myself..puris puffed well and remained puffy and crispy.
Semolina is the main key for it to retain its shape. Characteristics of different flours and semolina plays a huge role in cooking.  Hmm...now I have realized that I have entered field "kitchen" which doesnot have boundaries nor any limits nor any rules. Every dish is like your baby. :-) how you nourish it is upto you.
           The moment it starts raining..our tongue craves for aomething spicy fried food. May be it is just a psychology.This weekends heavy downpour in bangalore, left us with no option to step outside. Power cut everywhere.  No obstacles can stop us from savouring panipuris. Quickly prepared the dough, fried puris, potato stuffing and pani.
           Hmm...yummy...our son tasted it for the firsttime. He enjoyed puris with stuffing. :-)
             "Where there is a will...there is panipuri":-)

       
         

Wednesday, April 26, 2017

Secret Ingredient

    She hardly had any of the amenities of today's world. She had the most unequipped kitchen in our surroundings. She barely had any utensils except for a bowl. She quickly picked up 3 small stones fallen nearby. Arranged them triangular. It looked like chula. Picked handful of small sticks..and ignited her so called stove. She had prepared the roti dough in the only vessel she had. She didnot have roller to roll the rotis in proper shape. Within no time she prepared the rotis in hand....put it on fire..and the roti puffed so well...wow!!!                                                              
      She quickly served the hot roti to her husband who had returned from work. Both of them smiling at each other savouring the hot rotis. :-) :-) 
      I was smiling at myself looking at the lovely couple. This incident took place near silk board bus stop. I was waiting for the bus. This incident made me thoughtful for while. There are various recipes for any dish but only some of them top the list as rest may lack the secret ingredient. I.e Love... It's "love" for cooking.. It's "love" for the person whom we are cooking. Not only cooking but everything for that matter.
      From their attire I could guess that the couple were probably the ones who sell colourful pots, idols on roadside, which are very attractive. They paint the idols so colourful that it makes the idol come alive... Similar is the "roti" incident. With least of the least things on the earth she prepared food for him..."love" makes it possible.
     When, where, who will teach you life lessons.. We never know. The " secret ingredient " for our "life" dish is " love"... Shhhhhh...it's a SECRET:-):-)

Monday, February 13, 2017

ಅಹೊ ಭಾಗ್ಯವಿದು!

ಬಸ್ ಬಂತು ಬಸ್   ಬಂತು..ಎಲ್ಲರೂ ಲಗು ಲಗು ಬರ್ರಿ. ಏ ಒಂದು ನಿಮಿಷ ನನ್ನ luggage check ಮಾಡ್ತಿನಿ...ಏ ಅಜ್ಜಿ ಹತ್ತಿದ್ರಾ...ಹೀಗೆ ಮಾತಿನ ಚಕಮಕಿಯಲ್ಲಿ ಎಲ್ಲರೂ ನಮ್ಮ ರಥವನ್ನು ಏರಿದೆವು.
     ಹರೇ ಶ್ರೀನಿವಾಸ.... ಶ್ರೀಮದ್ ರಮಾ ರಮಣ ಗೋವಿಂದಾ ಗೋವಿಂದಾ ಘೋಷಣೆಗಳು ರೋಮಾಂಚನವನ್ನು ಮೂಡಿಸಿದವು. ಹರಟೆ..ನಗೆ ಚಟಾಕಿಗಳು...ಹಾಡುಗಳ ಮಧ್ಯೆ ಸಮಯ ಮಧ್ಯರಾತ್ರಿ ಮೀರಿದ್ದು ಯಾರಿಗೂ ಅರಿವಾಗಿರಲೇ ಇಲ್ಲ. ತೂಗಿರೇ ರಂಗನ...." ಹಾಡಿನೊಂದಿಗೆ ಎಲ್ಲರೂ ನಿದ್ರಾ ದೇವಿಗೆ ಶರಣಾದರು.
        ಈಗಷ್ಟೇ ನಿದ್ದೆ ಹತ್ತಿದೆ ಅನ್ನೊ ಅಷ್ಟರಲ್ಲಿ..ಬೆಳಕು ಹರಿದಿತ್ತು..ಕಣ್ಣು ತೆರೆದು ನೋಡಿದರೆ ನಮ್ಮ ಬಸ್ ಎಲ್ಲೋ ದೇವಲೋಕದ ಬಾಗಿಲಲ್ಲಿ ಇರುವಂತೆ ಭಾಸವಾಯಿತು. ಮಂಜು ಕವಿದ ದಾರಿ....ಜಿನುಗುವ ಇಬ್ಬನಿ...ಆಹಾ... ದಾರಿ ಮಂಜಿನಿಂದ ಮುಸುಕಿದ್ದರೂ ನಮ್ಮ ಗುರಿ ಸ್ಪಷ್ಟವಾಗಿತ್ತು. ನಿರ್ವಿಘ್ನವಾಗಿ ಮಹಿಷಿಯನ್ನು ತಲುಪಿದೆವು.
         ರಾಮದೇವರ ಸ್ವಾಗತಕ್ಕೆ ಸಜ್ಜಾಗಲು..ಎಲ್ಲರೂ ಲಗುಬಗೆಯಿಂದ ತಮ್ಮ ಪ್ರಾತಃ ಕರ್ಮಗಳನ್ನು ಮುಗಿಸುವುದರಲ್ಲಿ ನಿರತರಾದರು.
         ಸತ್ಯಸಂಧರ ಸನ್ನಿಧಾನ....ಝುಳು ಝುಳು ಹರಿಯುವ ತುಂಗೆಯ ಕಲರವ...ಒಂದು ತಿಂಗಳ ಪುಟ್ಟ ಕರುವಿನ ಹಂಬಾ ಧ್ವನಿ....ಮನಸ್ಸು ಪ್ರಸನ್ನವಾಯಿತು.
         ಮೇಲ್ನೋಟಕ್ಕೆ ಕೋರೆಯುವ ಚಳಿಯಂತೆ ಭಾಸವಾದರೂ ತುಂಗೆಯಲ್ಲಿ ಮೀಯುವಾಗ ಚಳಿಯ ಆಭಾಸವು ಆಗಲಿಲ್ಲ. ಶ್ರೀಗಳು ಬರುವುದು ಇನ್ನೂ ವಿಳಂಬವಾಗುತ್ತದೆ ಎಂದು ತಿಳಿದಾಕ್ಷಣ...ಕೊಂಚ ಸಮಯವಕಲ್ಲುಗಳರ್ಥ ಮಾಡದೆ ಪುರುಷರೆಲ್ಲ ಪಾರಾಯಣದಲ್ಲಿ ಹಾಗೂ ಸ್ತ್ರೀಯರೆಲ್ಲಾ ಪ್ರದಕ್ಷಿಣೆ ನಮಸ್ಕಾರದಲ್ಲಿ ತೊಡಗಿದರು..
       "ಶ್ರೀಗಳು ಶಿವಮೊಗ್ಗೆಯಿಂದ ಹೋರಟಿದ್ದಾರಂತೆ" ಎಂಬ ಘೋಷಣೆ ಕೇಳುತ್ತಿದ್ದಂತೆ ಎಲ್ಲರೂ ಬಾಗಿಲೆಡೆಗೆ ಧಾವಿಸಿದರು. ದರುಶನಕ್ಕಾಗಿ ಎಲ್ಲರಲ್ಲೂ ಇದ್ದ ಆ ಕಾತುರ...ಸೇವೆಗಾಗಿ ಇದ್ದ ತವಕ...ಪುರುಷರೆಲ್ಲರನ್ನೂ ಮಠದಿಂದ ಮುಂದೆ ೧km ಅಷ್ಟು ದೂರಾ ಬಿಸಿಲು...ಕಲ್ಲುಗಳ ಪರಿವಿಲ್ಲದೆ ನಡೆಸಿತು..
ಶ್ರೀಗಳವರ ವಾಹನ ಮಠದ ಗಡಿಯನ್ನು ತಲುಪುತ್ತಿದ್ದಂತೆ ಭಕ್ತ ಸಮೂಹದೊಂದಿಗೆ ಶ್ರೀಗಳವರೂ ಕಾಲ್ನಡೆಗೆಗೆ ಇಳಿದರು. ತಮ್ಮ ಆರಾಧ್ಯದೈವ ತಮ್ಮೊಂದಿಗೆ ಹೆಜ್ಜೆ ಇಡುವುದನ್ನು ಕಂಡು ಭಾವುಕರಾಗಿ ಎಲ್ಲರೂ ಅವರ ಪಾದಕ್ಕೆ ಕಿಂಚಿತ್ತು ಕಾದ ರಸ್ತೆಯ ತಾಪ   ಸೋಕಬಾರದೆಂದು ತಮ್ಮ ತಮ್ಮ ಮೇಲ್ಹೊದಿಕೆಗಳನ್ನು ದಾರಿಯುದ್ದಕ್ಕೂ ಹಾಸಿದರು. ಬಿಸಿಲು ಸೋಕದಂತೆ ಅವರಿಗೆ ಛತ್ರವನ್ನು ಹಿಡಿದರು. ವೈರಾಗ್ಯಕ್ಕೆ ಕಳಶದಂತಿರುವ ನಮ್ಮ ಶ್ರೀಗಳು ಭಕ್ತರ ಭಾವೋದ್ರೇಕವನ್ನು ಕಂಡು ಮಂದಹಾಸ ಬೀರುತ್ತ..‌"ನೆರಳು ಬಂದಿದೆ...ಇನ್ನು ನಡಿಯಿರಿ ಸಾಕು ಎಂದರು". ಸಾಕ್ಷಾತ್ ಬೃಹ್ಮ ಕರಾರ್ಚಿತ  ರಾಮದೇವರನ್ನು ಪೂಜಿಸುವ ಆ ಮಹಾಮಹಿಮರ ಪಾದಧೂಳಿ ತಮ್ಮ ಶಲ್ಯಕ್ಕೆ ಸೋಕಿದ್ದೇ ಮಹಾ ಪುಣ್ಯವೆಂದು..ಎಲ್ಲರೂ ತಮ್ಮ ತಮ್ಮ ಮೇಲ್ಹೋದಿಕೆಗಳನ್ನು ಗುರುಗಳ ರಕ್ಷಾಕವಚದಂತೆ ಧರಿಸಿದರು.
        ಬೆಂಗಳೂರಿನ ಜನದಟ್ಟಣೆಯಲ್ಲಿ ಎಲ್ಲೋ ದೂರದಿಂದ ಅಥವಾ ವಿದ್ಯುತ್ ಪರದೆಗಳ ಮೇಲೆ ದರ್ಶನ ಪಡೆದಿದ್ದ ನಮಗೆ ಶ್ರೀಗಳ ಸಮೀಪದ ದರ್ಶನ ಭಾವುಕರನ್ನಾಗಿ ಮಾಡಿತ್ತು. ಮಂದಸ್ಮಿತಭಾವದಿಂದ ಎಲ್ಲರ ಕಡೆಗೂ ದೃಷ್ಟಿ ಬೀರುತ್ತ ಆಶೀರ್ವದಿಸುತ್ತಿದ್ದ ಶ್ರೀಗಳನ್ನು ನೋಡಿದರೆ ನಮ್ಮನ್ನು ಉದ್ಧರಿಸಲೆಂದೇ ಧರೆಗಿಳಿದು ಬಂದ ಪರಮಾತ್ಮ ಎಂದು ವರ್ಣಿಸಿದರೆ ಅತಿಶಯೋಕ್ತಿ ಆಗಲಾರದು. ಶ್ರೀಗಳು ತಮ್ಮೊಡನೆ ನಮ್ಮೆಲ್ಲರನ್ನೂ  ಪಾದರಸದಂತೆ ಚುರುಕುಗೊಳಿಸಿದ್ದರು. ಅವರ ಭಕ್ತಿ‍,‌ ಅನುಸಂಧಾನಕ್ಕೆ ಅವರೇ ಸರಿಸಾಟಿ. ತುಂಗೆಗೆ ಇಳಿಯುವ ಮುನ್ನ ಸಾಷ್ಟಾಂಗ ನಮಸ್ಕಾರ ಮಾಡಿದರು.   ಅವರಿಂದ ದಂಡೋದಕ ಪಾದೋದಕಗಳನ್ನು ಪಡೆದು ಧನ್ಯರಾದೆವು.
       ಶ್ರೀಮನ್ಮೂಲರಾಮದೇವರ ಪೂಜೆಗೆ ಸಜ್ಜಾದ ಶ್ರೀಗಳು‍‍‍‍, ತ್ರಿವಿಕ್ರಮ ಸಂಭೋದಿಸುವಂತೆ ಮಧ್ವಾಚಾರ್ಯರರಂತೆ ಭಾಸವಾದರು. ಸವಿರತ ೪ ಘನ್ಟೆಗಳ ಕಾಲ ನಡೆದ ಪೂಜೆ...ಮಂತ್ರ ಘೋಷಗಳು...ಝಾಗಟೆಯ ನಾದ...ಆಹಾ ಈ ಜನ್ಮಕ್ಕೆ ಇನ್ನೇನು ಬೇಕು ಅನಿಸಿತು. ಸಂಪೂರ್ಣ ವಾತಾವರಣ ಭಗವನ್ಮಯ...ಲೌಕಿಕದ ರಗಳೆಗಳಿಂದ ಎಷ್ಟೋ ದೂರ ...ಸಂತೃಪ್ತಿಯಾಯಿತು. ಶ್ರೀಗಳ ಕೈಯಿಂದ ತೀರ್ಥ ಸ್ವೀಕರಿಸುವ ಭಾಗ್ಯ ನಮ್ಮದಾಯಿತು...ಧನ್ಯೋಸ್ಮಿ
      ತರುವಾಯ ಎಲ್ಲರೂ ಶ್ರೀಗಳಿಂದ ಕಮಲನಾಭನ ಚಿಹ್ನೆಯನ್ನು ಪಡೆದೆವು. ಪುರುಷರೆಲ್ಲ ಸುಮದ್ವ ವಿಜಯದ ಎರಡು ಶ್ಲೋಕಗಳ ಪಾಠವನ್ನು ಶ್ರೀಗಳಿಂದ ಪಡೆದರು. ನಂತರ ಶ್ರೀಗಳಿಂದ ಅಮೃತೋಪದೇಶ...ಪುರುಷರೆಲ್ಲರೂ ಶ್ರೀಗಳ ಪಾದಸೇವೆಗಾಗಿ ಕಾದು‌...ಅವರ  ಅನುಮತಿಯೊಂದಿಗೆ ಸೇವೆಯ ಭಾಗ್ಯ...ಅವರೊಂದಿಗೆ ಕೆಲ ಕಾಲವಾದರೂ ಒಡನಾಟವನ್ನು ಪಡೆದು ಧನ್ಯರಾದರು. ಮಧ್ವ ಮತಸ್ಥರಿಗೆ ಇದಕ್ಕಿಂತ ಶ್ರೇಷ್ಠ ದಿನ ಇನ್ನೊಂದಿರಲಿಕ್ಕಿಲ್ಲ.
      ದ್ವಾದಶಿಯಂದು ಮಸುಕಿನಲ್ಲಿ ಸ್ನಾನ...ದಂಡೋದಕ...ಪಾದೋದಕ ಗಳು ಆದವು. ಸಂಸ್ಥಾನ ಪೂಜೆ...ಶ್ರೀಗಳಿಂದ ತೀರ್ಥ.. ತದನಂತರ ಮಲೆನಾಡಿನ ಸೊಗಡಿನ ಭವ್ಯ ಪ್ರಸಾದ...ಮಠದ ಮೇಲ್ಛಾವಣಿಯಲ್ಲಿ ಊಟಕ್ಕೆ ಸಜ್ಜು ಮಾಡಲಾಗಿತ್ತು. ಪ್ರತಿಯೊಂದು ವ್ಯಂಜನವು ವಿಭಿನ್ನ ಹಾಗೂ ರುಚಿಕರವಾಗಿದ್ದವು. ಊಟದ ಸಾಲಿಗೆ ಸ್ವಯಂ ಶ್ರೀಗಳು ಬಂದು ಸಿಹಿಯನ್ನು ಬಡಿಸಿದ್ದು ಅವಿಸ್ಮರಣೀಯ. ತದನಂತರ ಶ್ರೀಗಳ ಪಾದಪೂಜೆ‍‍‍, ಫಲ ಮಂತ್ರಾಕ್ಷತೆಯನ್ನು ಎಲ್ಲರೂ ಪಡೆದೆವು.
          ಶ್ರೀಗಳೊಂದಿಗೆ ಸಮೂಹ ಚಿತ್ರ ತೆಗೆಸಿಕೊಂಡ ಪುರುಷರ ಸಂಭ್ರಮಕ್ಕೆ ಎಣೆಯೇ ಇಲ್ಲ. ಕೆಲಕಾಲ ಮಠದಲ್ಲಿ ಕಾಲ ಕಳೆದು..ತಂಡ ತಂಡವಾಗಿ ಬಂದ ಬಳಗದವರನ್ನು ಬಿಳ್ಕೋಟ್ಟು..‌ ಊಟಕ್ಕಿಂತ ಅದ್ಧೂರಿಯಾದ ಉಪಹಾರವನ್ನು ಸ್ವೀಕರಿಸಿ....ಶ್ರೀಗಳಿಗೆ ವಂದಿಸಿ...ಮರಳಿ ಗೂಡಿನೆಡೆಗೆ ಹೆಜ್ಜೆ ಇಟ್ಟೆವು.
         ಅಲ್ಲಿದ್ದ ಪ್ರತಿಯೊಂದು ಕ್ಷಣ ಅವಿಸ್ಮರಣೀಯ. ಸತ್ಯಾಭಿಜ್ಞಾಚಾರ್ಯ ಅವರ ಕುಟುಂಬದ ಎಲ್ಲರ ಸವಿನಯ, ಸಂಯಮಶೀಲ ಪ್ರವೃತ್ತಿ ಎಲ್ಲ ಕಾರ್ಯಕ್ರಮಗಳು ಸುಗಮವಾಗಿ ನೆಡೆಯುವಂತೆ ಮಾಡಿತು.
          ಇಂತಹ ಅಪರೂಪದ..ಅವಿಸ್ಮರಣೀಯ ಯಾತ್ರೆಯನ್ನು ಮಾಡಿಸಿದ ಪರಮಾತ್ಮನಿಗೆ...ಶ್ರೀಗಳಿಗೆ...ನಮ್ಮ ಕುಟುಂಬದ ಹಿರಿಯರಿಗೆ ಹಾಗೂ...ಈ ಕಾರ್ಯಕ್ರಮದ ಮುಂದಾಳುಗಳಿಗೆ ಹಾಗೂ ಕಾರ್ಯದರ್ಶಿಗಳಿಗೆ ನಮ್ಮ ಅನಂತ ವಂದನೆಗಳು.
           ಮೂಲರಾಮದೇವರ ಕೃಪಾಕಟಾಕ್ಷ ನಮ್ಮೆಲ್ಲರ ಮೇಲೆ ಹೀಗೆ ಸದಾ ಇರಲಿ.

              ನಾಹಂ ಕರ್ತಾ ಹರಿಃ ಕರ್ತಾ