ಅಪ್ಪಾ+ಅಣ್ಣಾ = ಅಪ್ಪಣ್ಣಾ
ಅಕ್ಕಾ+ಅವ್ವಾ= ಅಕ್ಕವ್ವಾ
ಇವು ಯಾವ ಸಂಧಿ? ಅಥವಾ ಸಮಾಸ?;-) ಅಥವಾ ಇದು ಕನ್ನಡದ ವ್ಯಾಕರಣಕ್ಕೆ ಒಂದು ಸವಾಲಿನಂತೆ ಕಾಣುತ್ತದಾ?
ಇದು ಅವಿಭಕ್ತ ಕುಟುಂಬದ ಸಂಬಂಧಗಳ ವ್ಯಾಕರಣ...:-) confused???? I will explain wait...
ಮುಂಡರಗಿಯ ಒಂದು ಅವಿಭಕ್ತ ಕುಟುಂಬ. ಹನುಮಂತಚಾರ್ ಹಾಗೂ ವೆಂಕುಬಾಯಿ ದಂಪತಿಗಳು ಆ ಕುಟುಂಬದ ಅಂಗ. ವೃತ್ತಿಯಲ್ಲಿ ವೈಧ್ಯರಾದ ಹನುಮಂತಾಚಾರ್ ಧರ್ಮಕ್ಕೆ ಕಟಿ ಬದ್ಧರಾಗಿದ್ದರು. ನಿತ್ಯ ತಮ್ಮ ವೃತ್ತಿ ಕೆಲಸ ಮುಗಿಸಿಕೊಂಡು ಬಂದ ತಕ್ಷಣ ಕಂಬಳಿ ಹೊದ್ದುಕೊಂಡು ಎಲ್ಲ ಬಟ್ಟೆಗಳನ್ನು ನೆನಸುತ್ತಿದ್ದರು. ಅವರಿಗೆ ಸಹಧರ್ಮಿಣಿಯಾಗಿ ವೆಂಕುಬಾಯಿ ಸರ್ವ ಕಾಲಕ್ಕೂ ಅವರಿಗೆ ಒತ್ತಾಸೆಯಗಿದ್ದರು. ಅವರು ಒಲೆಯ ಮುಂದೆ ಅಡುಗೆ ಮಾಡಿಟ್ಟರೆ ಆಚಾರ್ ದೇವರ ಮನೆಯಿಂದಲೇ ನೈವೇದ್ಯ ಮಾಡುತ್ತಿದ್ದರು. ಈ ದಂಪತಿಗಳಿಗೆ 3 ಹೆಣ್ಣು ಮಕ್ಕಳು. ಗಂಡು ಸಂತಾನ ಆದರೂ ಒಂದಲ್ಲ ಒಂದು ಕಾರಣದಿಂದ ಬದುಕಿ ಉಳಿಯಲಿಲ್ಲ. ಆ ಕೊರಗು ಅವರನ್ನು ಕೊನೆ ಉಸಿರಿನ ವರೆಗೂ ಕಾಡದೆ ಇರಲಿಲ್ಲ. ಸಾಧ್ವಿ ವೆಂಕುಬಾಯಿ ಕೈ ಅಡಿಗೆ ಅಂದರೆ ಸುತ್ತ ಮುತ್ತಲಿನ ಮನೆಗಳಲ್ಲೆಲ್ಲಾ ಬಾಯಲ್ಲಿ ನೀರು ಬರುತ್ತಿತ್ತು. ಮಂಡಿಗೆ ಇಂದ ಹಿಡಿದು ರುಚಿ ರುಚಿಯಾದ ಅಡಿಗೆ ಮಾಡಿ ಬಡಿಸುವುದರಲ್ಲಿ ನಿಪುಣಿ. ಬೇಸಿಗೆ ರಜ ಹತ್ತಿರ ಬಂತೆಂದರೆ ಮೊಮ್ಮಕ್ಕಳು ಬರುತ್ತಾರೆ ಅಂತ ಅಳ್ಳಿಟ್ಟು ಮೊದಲಾದವುಗಳನ್ನು ಮಾಡಿ ಇಡುವರು. ಮೊಮ್ಮಗ ಅಜ್ಜಿ ತುಪ್ಪಾ ಕಡಿಮೆ ಆಯಿತು ಅಂತ ಬಿಗುಮಾನ ಬೀರಿದರೆ ಸಾಕು ಬಟ್ಟಲ ತುಂಬ ಹೆತ್ತುಪ್ಪಾ ಹಾಕುವಳು ಕಾಕು ಅಜ್ಜಿ :-)
ಕಾಕು+ಅಜ್ಜಿ= ಕಾಕುಅಜ್ಜಿ
ಏನಿದರ ಮರ್ಮ? ಮನೆಯಲ್ಲಿ ಭಾವನ ಮಕ್ಕಳಿಗೆ ಕಾಕು ಆಗಿದ್ದ ವೆಂಕುಬಾಯಿ.. ಅಭ್ಯಾಸ ವಶಾತ್ ಅವರ ಸ್ವಂತ ಮಕ್ಕಳೂ ಅವರನ್ನ ಕಾಕು ಎಂತಲೇ ಸಂಭೋಧಿಸುತ್ತಿದ್ದರು.
ಹಾಗಾಗಿ ಮೊಮ್ಮಕ್ಕಳಿಗೆ "ಕಾಕು ಅಜ್ಜಿ" ಆದರು. ನೀಳ ಕಾಯ, ದುಡಿಯುವ ಪ್ರವೃತ್ತಿ, ಸಹಾಯ ಕೇಳಿ ಬಂದವರಿಗೆ ಎಂದು ಇಲ್ಲಾ ಎನ್ನುತ್ತಿರಲಿಲ್ಲ. ಧರ್ಮದ ಬಗ್ಗೆ ಅಪಾರ ಗೌರವ. ಅವರ ಬಾಯಿಯಿಂದ ಒಮ್ಮೆಯೂ ಭೀಮಸೇನ ದೇವರಿಗೆ ಭೀಮ ಅಂತಾಗಲಿ, ಭೀಷ್ಮಾಚಾರ್ಯರಿಗೆ ಭೀಷ್ಮಾ ಅಂತಾಗಲಿ ಬಂದಿಲ್ಲ. ಸರಳ ವ್ಯಕ್ತಿತ್ವದ ಕಾಕು ಅಜ್ಜಿ ನಮ್ಮನ್ನೆಲ್ಲ ಅಗಲಿ ಹಲವು ವರ್ಷಗಳೇ ಕಳೆದಿದ್ದರೂ ತಮ್ಮ ಮೌಲ್ಯಗಳ ಮೂಲಕ ನಮ್ಮ ನಡುವೆ ಇದ್ದಾರೆ.
ಪೀಳಿಗೆಯಿಂದ ಪೀಳಿಗೆಗೆ ಆ ಮೌಲ್ಯಗಳು ನಮ್ಮ ಸ್ವಭಾವಗಳಲ್ಲಿ ಬೇರುರಬೇಕು. ಅಂದಾಗಲೇ ನಾವು ಕಾಕು ಅಜ್ಜಿಯ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು ಅಂತ ಹೆಮ್ಮೆ ಇಂದ ಹೇಳಬಹುದು.
ನಮ್ಮ ಹಿರಿಯರ ಬಗ್ಗೆ ನಾವು ಅಭಿಮಾನ ಪಡೊದು ಸಹಜ. ಆದರೆ ಅವರ ಬಗ್ಗೆ ಕುಟುಂಬೇತರರು ಅಭಿಮಾನ ಪಟ್ಟರೆ ಅದಕ್ಕಿಂತ ಹೆಮ್ಮೆಯ ವಿಷಯ ಇನ್ನೊಂದಿಲ್ಲ. ಅಂತಹ ಮೇರು ವ್ಯಕ್ತಿತ್ವ ಹೊಂದಿದವರು ಅಜ್ಜಾನ ಅಪ್ಪ ತಮ್ಮಣ್ಣಜ್ಜಾ ಹಾಗೂ ಅಜ್ಜಿಯ ಅಮ್ಮಾ, ಕಾಕು ಅಜ್ಜಿ.
ಸೀನಣ್ಣಜ್ಜಾ ಅವರ ಮೌಲ್ಯಗಳನ್ನ ಎತ್ತಿ ಹಿಡಿದರು. ಮುಂದಿನ ಜವಾಬ್ದಾರಿಯನ್ನು ನಮಗೆ ವಹಿಸಿದ್ದಾರೆ. ಅದನ್ನು ನಿರ್ವಹಿಸುವ ಹೊಣೆ ನಮ್ಮದು. ಇಲ್ಲವಾದರೆ ಕಾಕು ಅಜ್ಜಿ

ಅವರ ಮನೆಯ ಅವಶೇಷಗಳು ಉಳಿದಂತೆ ಅವರ ಹೆಸರು ಮಾತ್ರ ಉಳಿದುಕೊಳ್ಳುತ್ತದೆ. :-( ಮೊನ್ನೆ ನಾವು ಮುಂಡರಗಿಗೆ ಹೋದಾಗ ನೋಡಿ ಎಲ್ಲರ ಮನ ಮಿಡಿಯದೇ ಇರಲಿಲ್ಲ.
ವಿದ್ಯಾ ಮಾಮಾ, ಸುರೇಶ್ ಮಾಮಾ, ರಮೇಶ್ ಮಾಮಾ ಹಾಗೂ ಮಂಜು ಅಕ್ಕಾ ತಮ್ಮ ಬಾಲ್ಯದ ದಿನಗಳನ್ನು ಮೆಲಕು ಹಾಕಿದರು. ೧೦ ವರ್ಷಗಳ ನಂತರ ತಮ್ಮ ಆಪ್ತರನ್ನು ಭೇಟಿ ಮಾಡಬೇಕಾದರೆ ಮೊದಲು ಗುಡಿಯಲ್ಲಿ ಸಂಧಿಸಬೇಕಂತೆ. ಕಾಕತಾಳೀಯವೆಂಬಂತೆ ಎಲ್ಲರೂ ತಮ್ಮ ಸಂಬಂಧಿಕರನ್ನ ವಿಠೋಬ ದೇವರ ದೇವಸ್ಥಾನದಲ್ಲಿ ಭೇಟಿ ಮಾಡಿದರು.ತುಂಗಭದ್ರಾ ಸ್ನಾನ, ಕನಕಪ್ಪನ ಬೆಟ್ಟವನ್ನು ಆಜ್ಜಿಯರು ಹತ್ತಿದ್ದು, ನರಸಿಂಹ ದೇವರಿಗೆ ನೈವೇದ್ಯ, ಗಂಡಾರತಿ(ಗರುಡಾರತಿ) ಹೊತ್ತಿದ್ದು, ರಾಮೇನಹಳ್ಳಿ ವೆಂಕಪ್ಪನ ದರ್ಶನ, ಬಿದರಳ್ಳಿಯಲ್ಲಿ ಕಂಡ ಬಾಲಗೋಪಾಲನ ಮುದ್ದಾದ ಪಾದಗಳು, ಮದಲಘಟ್ಟಿ ಮುಖ್ಯಪ್ರಾಣ ದೇವರ ಅಭಿಷೇಕ ಎಲ್ಲವೂ ಮನಸ್ಸಿಗೆ ತೃಪ್ತಿ ನೀಡಿತು.
"ನಮ್ಮ ನೆನಪಿನ ಅಂಗಳ ಸುಂದರ ನೆನಪುಗಳಿಂದ ಹೀಗೆಯೇ ಹಸಿರು ಹಸಿರಾಗಿರಲಿ. ಅದರಲ್ಲಿ ಹೊಸ ಚಿಗುರು ಹಳೆ ಬೇರುಗಳ ಬಾಂಧವ್ಯ ಬೆಳೆಯುತ್ತಿರಲಿ"