ವಿಜು ಅದನ್ನಾ ಎತ್ತಿಟ್ಟಿಯಾ??
ನನಗೆ ಒಂದು ಕ್ಷಣ ಏನು ಅಂತಾ ಗೊತ್ತಾಗಲೇ ಇಲ್ಲಾ....??? ನೆನಪಾಗದೆ...ಅಡಿಗೆ ಮನೆಯಲ್ಲಿ ಆ ಕಡೆ ಈ ಕಡೆ ಕಣ್ಣು ಹಾಯಿಸಿದೆ.
ಅಯ್ಯೋ ರಾಮ ಎಂದು ಉದ್ಘರಿಸುತ್ತಾ ನೋಡಿದೆ. ಬೆಳ್ಳಗಿನ ನೈವೇದ್ಯ ದ ಬಟ್ಟಲು ಕಪ್ಪಾಗಿತ್ತು. ಕಲ್ಲುಸಕ್ಕರೆಗೆ ಕಪ್ಪು ಇರುವೆಗಳು ದಾಳಿ ಮಾಡಿದ್ದವು. "ಕೋಟೆ ಕಾಯುವವರೆ ಇಲ್ಲದಾಗ ಅವಕ್ಕೆ ಯಾರ ಅಪ್ಪಣೆ ಬೇಕು":-) ಲಗುಬಗೆಯಲ್ಲಿ ಬಟ್ಟಲು ಎತ್ತಿದೆ...ತಕ್ಷಣ ಇರುವೆಗಳಿಗೆ ಭೂಕಂಪ ಆದಂತೆ ಆಯಿತು. ಅಷ್ಟು ಹೊತ್ತು ಬಟ್ಟಲಿನ ಮೇಲೆ ಕಪ್ಪು ಹೊದಿಕೆಯಂತಿದ್ದ ಇರುವೆಗಳು ಕ್ಷಣಾರ್ಧದಲ್ಲಿ ಎಲ್ಲಾ ದಿಕ್ಕುಗಳಲ್ಲಿ ಚದುರಿದವು. ಒಂದು ಕ್ಷಣ ಅನಿಸಿತು...ಅವುಗಳಿಗೆ ನಾವು ಮನುಷ್ಯರು ಡೈನೋಸಾರ್ ಇದ್ದಂತೆ. ಕಕ್ಕಾಬಿಕ್ಕಿಯಾಗಿಬಿಟ್ಟವು ಪಾಪ. ಎಲ್ಲಾ ಇರುವೆಗಳು ಹೋದವು ಅಂದುಕೊಳ್ಳುವಷ್ಟರಲ್ಲಿ ಕಲ್ಲು ಸಕ್ಕರೆಯ ಕೆಳಗೆ ಒಂದು ಇರುವೆ ಅವಿತು ಕುಳಿತಿತ್ತು. ಡೈನೋಸಾರ್ ದಾಳಿಗೆ ಹೆದರಿ ಅವಿತುಕೊಂಡ ಜೀವಿಯಂತೆ....ನಾನು ನಿಧಾನಕ್ಕೆ ಬಟ್ಟಲನ್ನು ಕೆಳಗೆ ಇಟ್ಟೆ. ಕಲ್ಲುಸಕ್ಕರೆಗಳ ಪುಟ್ಟ ರಾಶಿಯಿಂದ ಇರುವೆ ಆಚೆ ಇಣುಕಿತು. ಡೈನೋಸಾರ್ ಎಲ್ಲೋ ಹೋಗಿದೆ ಎಂದು ಆಚೆ ಬರುವ ಧೈರ್ಯ ಮಾಡಿತು. ಹೇಗೂ ಆಚೆ ಬಂದಾಗಿದೆ ಇನ್ನೇನೂ ಯೋಚನೆ ಎಂದು ..ಒಂದು ಕಲ್ಲುಸಕ್ಕರೆಯ ತುಂಡನ್ನು ಹರಸಾಹಸದಿಂದ ಬಟ್ಟಲಿಂದ ಆಚೆ ತಂದಿತು. ನನಗೂ ಕುತೂಹಲ ಕೆರಳಿತು. ಅದನ್ನೇ ನೋಡುತ್ತಾ ಕುಳಿತೆ.
ಬಟ್ಟಲಿಂದ ಏನೋ ಕಲ್ಲುಸಕ್ಕರೆ ಕೆಳಗೆ ಬೀಳಿಸಿತು.... ಆದರೆ ತನ್ನ ದೇಹಕ್ಕಿಂತ ಭಾರವಾಗಿದ್ದ ಕಲ್ಲುಸಕ್ಕರೆಯನ್ನ ಹೇಗೆ ಒಯ್ಯುವುದೋ?? 🤔 ಪಾಪ ನಾನೇ ಎಲ್ಲಿಗೆ ತಲುಪಿಸಲಿ ಅಂತ ಕೇಳಿ home delivery ಮಾಡ್ಲಾ ಅಂದುಕೊಂಡೆ..online shopping ಪ್ರಭಾವ 😀 impractical..
ಈ ಇರುವೆ ಪಡ್ತಾ ಇದ್ದ ಕಷ್ಟ ನೋಡಿ ಎಲ್ಲಿಂದಲೋ ಇನ್ನೊಂದು ಇರುವೆ ಬಂದು ಕೈ ಜೋಡಿಸಿತು. ಎರಡು ಸೇರಿ ಪ್ರಯಾಣ ಸಾಗಿಸಿದವು. ನನ್ನ ಮುಖದ ಮೇಲೂ ಮುಗುಳ್ನಗೆ ಮೂಡಿತು. ಎಲ್ಲಾ ಇರುವೆ ಒಂದೇ ತರಹ ಅನಿಸುತ್ತವೆ.."ನಮಗೆ" :-) ಆ ಹೊಸ ಇರುವೆ ಅದರ friend, neighbors, colleague or spouse..ಯಾರೂ ಆಗಿರಬಹುದು. Its out of our reach. ದಾರಿ ಮಧ್ಯದಲ್ಲಿ ಒಂದು ಹೊಂಡ ಎದುರಾಯಿತು. ( ಅಡಿಗೆ ಮನೆ ಅಂದ ಮೇಲೆ ನೀರು ಬಿದ್ದಿರುವುದು ಅತೀ ಸಾಮನ್ಯ) ನಮ್ಮ ಚೂರು ನೀರು ಅವುಗಳಿಗೆ ಹೊಂಡವೇ ಸರಿ.
ಮುಂದೆ ಹೇಗೆ ಎಂಬ ಪ್ರಶ್ನೆ ನನಗೆ. ಅವೆರಡು ಒಂದು ಕ್ಷಣ ಕಲ್ಲುಸಕ್ಕರೆ ಕೆಳಗಿಟ್ಟು ಏನೋ ಗುಸುಗುಸು ಮಾಡಿದಹಾಗೆ ಭಾಸವಾಯಿತು. ಆದರೂ ಪಾಪ ಆ ಚಿಕ್ಕ ಜೀವಿಗಳು ಏನು ಮಾಡಿಯಾವು ಎಂದು...ನೀರು ಒರೆಸುವ ಬಟ್ಟೆ ತರಲಾ ಅಂದುಕೊಂಡೆ...ಆದರೆ ಒರೆಸಲು ಹೋಗಿ ಇರುವೆಗಳೇ ಓಡಿ ಹೋದರೆ ಅಂತ ಸುಮ್ಮನಾದೆ...
ತಕ್ಷಣ ತ್ರಿವಿಕ್ರಮನ ಒಂದು story ನೆನಪಾಯ್ತು. "Ant and the dove". ಪಾರಿವಾಳ ನೀರಿನಲ್ಲಿ ಮುಳುಗುತ್ತಿರುವ ಇರುವೆಯನ್ನು ಬದುಕಿಸಲು ಎಲೆಯನ್ನು ಎಸೆಯಿತಂತೆ. ನಾನೂ ಕೂಡಲೆ ಅಲ್ಲಿಯೇ ಬಿದ್ದ ಚಿಕ್ಕ cardboard ತುಂಡನ್ನು ನೀರಿನಲ್ಲಿ ಎಸೆದೆ. ಅವುಗಳ ಅದಕ್ಕಾಗಿಯೇ ಕಾಯುತ್ತಿದ್ದವೋ ಎನ್ನುವಂತೆ ಎರಡೂ ಸೇರಿ ಕಲ್ಲುಸಕ್ಕರೆಯ ಜೊತೆ cardboard bridge ಏರಿ ಚಿಕ್ಕ ಮಡುವನ್ನು ದಾಟಿದವು. ಅವುಗಳ ನಿಟ್ಟುಸಿರನ್ನೂ ನಾನೇ ಬಿಟ್ಟೆ. ಅವುಗಳು ಪಡುತ್ತಿದ್ದ ಪ್ರಯಾಸ ಇನ್ನೂ ಎಷ್ಟು ದೂರವೋ ಅಂತ ನನಗೆ ಅನಿಸುತ್ತಿತ್ತು.ಇರುವೆಗಳ ola, uber ಇದ್ದಿದ್ರೆ ಪಾಪ ನೆರವಾಗಿರೊದು ಅನಿಸ್ತು. ನಾನು ಆ ಕಡೆ ಈ ಕಡೆ ನೋಡಿದೆ. ಬಾಗಿಲನ ಮೂಲೆಯಲ್ಲಿ ಚಿಕ್ಕ ರಂಧ್ರ ಕಾಣಿಸಿತು. Mostly ಅದೇ ಅವರ ಮನೆ ಅನಿಸ್ತು. ನನ್ನ ಕಣ್ಣುಗಳು ಅವುಗಳನ್ನೇ ಹಿಂಬಾಲಿಸುತ್ತಿದ್ದವು. ಇರುವೆಗಳಿರುವ ಜಾಗದಿಂದ ರಂಧ್ರ ಸುಮಾರು ದೂರವಿತ್ತು. ಪಾಪ ಇನ್ನೂ ಅಷ್ಟು ದೂರ ಇರುವೆಗಳು ಪ್ರಯಾಣಿಸಬೇಕಲ್ಲಾ ಅಂತ ನಾನು ಮರಗುತ್ತಿದ್ದೆ...ನೋಡಿದರೆ ಅಲ್ಲಿ ಅವುಗಳ ದೊಡ್ಡ ಬಳಗವೇ ಕಾದು ನಿಂತಂತಿತ್ತು. ಶಿಸ್ತಿನ ಸಾಲಿನಲ್ಲಿ ಒಂದರಿಂದ ಇನ್ನೊಂದು ಇರುವೆಗೆ ನಿರಾಯಾಸವಾಗಿ ಕಲ್ಲುಸಕ್ಕರೆಯನ್ನ ಸಾಗಿಸಿದವು.
ಇರುವೆಗಳಷ್ಟು ಶ್ರಮಜೀವಿಗಳು ಬಹುಶಃ ಯಾವುವೂ ಇಲ್ಲಾ. ಅವುಗಳು ಹುತ್ತನ್ನು ಕಟ್ಟುವ ಪರಿ, ಅದರಲ್ಲಿ ಹಾವಿಗೆ ಆಶ್ರಯ ನೀಡುವುದು, ಮಳೆಗಾಲಕ್ಕೆ..ಚಳಿಗಾಲಕ್ಕೆ ಎಂದು ಆಹಾರ ಸಂಗ್ರಹಿಸಿ ಇಟ್ಟುಕೊಳ್ಳುವ ಜಾಣ್ಮೆ..ಶಿಸ್ತುಬದ್ಧ ಜೀವನ..ಯಾವಾಗಲೂ ಕಾರ್ಯನಿರತವಾಗಿರುವುದು..ಸಂಘಜೀವನ...ಯಾರಿಗಾದರೂ ಅಚ್ಚರಿ ಮೂಡಿಸುತ್ತವೆ.
ಮನುಷ್ಯ ಹಾಗೂ ಅನ್ಯಜೀವಿಗಳಲ್ಲಿರುವ ಪ್ರಧಾನ ವ್ಯತ್ಯಾಸ ನಮಗಿರುವ ಬುದ್ಧಿಶಕ್ತಿ, ಆಲೋಚನಾ ಶಕ್ತಿ, ಮಾತನಾಡುವ ಶಕ್ತಿ, ವಿವೇಕ. ನಮ್ಮ ಜೀವನವನ್ನು ರೂಪಿಸಿಕೊಳ್ಳಲು ನಮಗೆ ಈ ಎಲ್ಲಾ ಪೂರಕಶಕ್ತಿಗಳನ್ನು ಕೊಟ್ಟಿದ್ದಾನೆ. ಅವುಗಳನ್ನು ಸಕಾಲಕ್ಕೆ, ಸಮರ್ಥವಾಗಿ ಬಳಸಿಕೊಳ್ಳುವ ಜವಾಬ್ದಾರಿಯನ್ನು ನಮಗೆ ಕೊಟ್ಟಿದ್ದಾನೆ.
ಅದೇ ಬೇರೆ ಜೀವಿಗಳಲ್ಲಿ ಜೀವನದ ಕಲೆಯನ್ನು ಸ್ವಾಭಾವಿಕವಾಗಿ ಇಟ್ಟಿದ್ದಾನೆ. ಇರುವೆಗಳಿಗೆ ಸಾಲಿನಲ್ಲಿ ನಿಂತುಕೊಳ್ಳುವುದನ್ನ ಬಹುಶಃ ಯಾರೂ ತಿದ್ದಿ ತಿದ್ದಿ ಹೇಳಿಲ್ಲಾ. ನಾವು ಮನುಷ್ಯರು ಶಾಲೆಗೆ ಹೋಗಲು ಪ್ರಾರಂಭ ಮಾಡಿದ ದಿನದಿಂದ ಸಾಲಾಗಿ ನಿಲ್ಲುವುದನ್ನು ಹೇಳಿಸಿಕೊಂಡಿರುತ್ತೇವೆ. ವಿಪರ್ಯಾಸವೆಂದರೆ ಎಲ್ಲಾ ಕಾಲದಲ್ಲೂ ಎಲ್ಲಾ ಸಮಯದಲ್ಲೂ queue system ಹೇಗೆ follow ಮಾಡ್ತಿವಿ ಅಂತ ನಮಗೆ ಗೊತ್ತು 😂
ಇರುವೆ ಮಣ್ಣಿನ ಕಣಕಣಗಳನ್ನು ಸೇರಿಸಿ...ಸತತವಾಗಿ ಶ್ರಮಿಸಿ multistorey ಮನೆ ಕಟ್ಟುತ್ತದೆ. ಯಾವುದೇ engineering degree ಇಲ್ಲದೆ...ಅದರ ಮೇಲೆ ಏನೂ ಅಭಿಮಾನ ಪಡದೇ ಹಾವಿಗೆ ಆಶ್ರಯ ನೀಡುತ್ತದೆ. ಬಹುಶಃ ಹಾವು ಯಾವುದೇ ಬಾಡಿಗೆ ಕೊಡಲ್ಲಾ 😂
ಬಿಸಿಲುಗಾಲದಲ್ಲಿ ಅನವರತ ದುಡಿದು.ಆಹಾರ ಸಂಗ್ರಹ ಮಾಡಿಕೊಳ್ಳುತ್ತದೆ..ಮಳೆಗಾಲ, ಚಳಿಗಾಲದಲ್ಲಿ ತನಗೆ ಹೊರಗೆ ಓಡಾಡಲು ಕಷ್ಟವಾದಾಗ ಸಂಗ್ರಹಿಸಿಟ್ಟಿದ್ದನ್ನಾ ಉಪಯೋಗಿಸುತ್ತದೆ. ಯಾವ LIC policy, accounts knowledge ಇಲ್ಲದೆ.😂
ಸಾಮಾನ್ಯವಾಗಿ ಮಕ್ಕಳ ಕಥೆಗಳೆಲ್ಲಾ ಪ್ರಾಣಿ, ಪಕ್ಷಿಗಳು, ಕೀಟಗಳ ಆಧಾರಿತವಾಗಿರುತ್ತವೆ. ಕಾರಣ ಮಕ್ಕಳಲ್ಲಿ ಈ ಗುಣಗಳು ಆಗಿನಿಂದ ಸ್ವಾಭಾವಿಕವಾಗಿ ಬೆಳೆಯಲಿ ಎಂಬ ಉದ್ದೇಶ... ಜೊತೆಗೆ ಅದನ್ನು ಹೇಳಿಕೊಡುವ ಹಿರಿಯರಿಗೆ, ಪೋಷಕರಿಗೂ ಸಂದೇಶವಿರುತ್ತದೆ. ಆದರೆ ನಾವು ಅದನ್ನ "ಮಕ್ಕಳಿಗಷ್ಟೇ" ಅಂತ ನಿರ್ಲಕ್ಷಿಸುತ್ತೇವೆ.
ಕೇವಲ ಇರುವೆ ಮಾತ್ರವಲ್ಲಾ ನಮ್ಮ ಸುತ್ತಮುತ್ತ ಇರುವ ಹಲವು ಜೀವಿಗಳಿಂದ ನಾವು ಜೀವನದ ಪಾಠಗಳನ್ನು ಕಲಿಯಬಹುದು. "Ants' Psychiatrist"..." Ants' life skill training center"...ಬಹುಶಃ ಈ ತರಹದ ಫಲಕಗಳು ಯಾವತ್ತೂ ಹುಟ್ಟಲ್ಲಾ. 😋 ಬುದ್ಧಿಜೀವಿಯಾದ ನಮಗೆ ಇವು ಬೇಕಾ???
"ನಾನು ಇರುವೆ" ಎಂಬ ಶಿರ್ಷೀಕೆ ಯಲ್ಲಿ "ನಾನು" ಒಂದು ಸರ್ವನಾಮ. ಕೇವಲ ವ್ಯಾಕರಣದ ಸರ್ವನಾಮವಾಗಿರದೆ.. ಸರ್ವನಾಮ ವಾಚ್ಯನಾದ ಭಗವಂತನ ವ್ಯಾಪ್ತಿ ಸರ್ವತ್ರ ಇರುವುದರ ಸಾಕ್ಷಿಯಾಗಿದೆ.
"ನಾನು(ಭಗವಂತ) ಇರುವೆ" ಆದ್ದರಿಂದ ನೀನು ನೀನಾಗಿ "ಇರುವೆ"...
ಇದನ್ನು ಅರಿತವನಿಗೆ ಇದೆ ಸುಖವಾದ ಬಾಳ್ವೆ 😃
" ಬಾಯಿ ಮಾತು ನಿಂದೇ...ಬರುವ ಭಾಗ್ಯವು ನಿಂದೇ"
ಹರೇ ಶ್ರೀನಿವಾಸ🙏🙏🙏