ಎಲ್ಲೇಲ್ಲೂ ದೀಪಗಳ ಸಂಭ್ರಮ. ಹಬ್ಬದ ತಯಾರಿಯ ಜೊತೆಗೆ ಎಲ್ಲರೂ ಯಾತ್ರೆಯ ತಾರಾತುರಿಯಲ್ಲೂ ಇದ್ದೆವು. ದೀಪಾವಳಿಯ ಪಾಡ್ಯ ದ ರಾತ್ರಿ ಎಲ್ಲರೂ ನಿಗದಿತ ಸಮಯಕ್ಕೆ ನಿಗದಿತ ಸ್ಥಳಕ್ಕೆ ಬಂದು ಸೇರಿದ್ದೆ ವು. ಕಾಕತಾಳಿಯವೋ ನರಸಿಂಹ ದೇವರ ಶುಭಾಶೀರ್ವಾದವೆಂಬಂತೆ ನಮ್ಮ ರಥ (ಬಸ್) ನ ನಾಮಾಂಕಿತವೂ ಶ್ರೀ ಲಕ್ಷ್ಮೀ ನರಸಿಂಹ ಎಂದಿತ್ತು. ಹರೇ ಶ್ರೀನಿವಾಸ, ಹರಿ ಸರ್ವೋತ್ತಮ ವಾಯು ಜೀವೋತ್ತಮ ಘೋಷಗಳೊಂದಿಗೆ ನಮ್ಮ ಪ್ರಯಾಣ ಪ್ರಾರಂಭವಾಯಿತು. ಗುಂಪಿನಲ್ಲಿ ಮಧ್ವೇಶ್ ಮಾಮಾ ದಂಪತಿಗಳನ್ನು ಹೊರತುಪಡಿಸಿ ಮಿಕ್ಕವರೆಲ್ಲರಿಗೂ ಇದು ಅಹೋಬಲದ ಮೊದಲ ಯಾತ್ರೆಯಾಗಿತ್ತು. ಕೇಳಿ ತಿಳಿದುಕೊಂಡ ಮಾಹಿತಿಯ ಹೊರತು ನವ ನರಸಿಂಹ ಇರುವ ಕ್ಷೇತ್ರಗಳ ಕುರಿತು ನಮ್ಮೆಲ್ಲರ ಮನಸ್ಸಿನಲ್ಲಿದ್ದಿದ್ದು ಒಂದು ಪ್ರಾಮಾಣಿಕ ಭಕ್ತಿ ಹಾಗು ಕೌತುಕ ಅಷ್ಟೇ.
ಅಹೋಬಲ ತಲುಪುವ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಿಗದಿತ ತಂಗುದಾಣಕ್ಕೆ ಸುರಕ್ಷಿತವಾಗಿ ತಲುಪಿದೆವು. ಇಲ್ಲಿಂದ ಶುರುವಾಯ್ತು ನೋಡಿ ಅಚ್ಚರಿಗಳ ಸರಮಾಲೆ. ನಮ್ಮ ಸ್ವಾಗತಕ್ಕೆ ವಾನರ ಸೈನ್ಯವೇ ನಿಂತಿತ್ತು. ಅದರಲ್ಲೂ ಒಂದು ಮಂಗಣ್ಣ ನಮ್ಮ ಉಂಡಿ ಚೀಲವನ್ನು ತೆಗೆದುಕೊಂಡು ತಾನು ಸವಿದು ತನ್ನ ಬಾಂಧವರೆಲ್ಲರಿಗೂ ಹಂಚಿತು. ಎಲ್ಲರೂ ಎದ್ದೆವೋ ಬಿದ್ದೆವೋ ಎನ್ನುತ್ತ ನಮ್ಮ ಕೊಠಡಿಯೊಳಗೆ ಸೇರಿಕೊಂಡೆವು. ಎಲ್ಲರೂ ಬೆಳಗಿನ ಆಹ್ನಿಕಗಳನ್ನು ಮುಗಿಸಿ ತಿಂಡಿ ತಿಂದು ಯಾತ್ರೆಗೆ ಸಜ್ಜಾದೆವು.
ಪ್ರಪ್ರಥಮವಾಗಿ ದಿಗುಲ ಅಹೋಬಲ ನರಸಿಂಹ ದೇವರ ದರ್ಶನ ಪಡೆಯಲು ಮುಂದಾದೆವು. ಶ್ರೀನಿವಾಸನು ತನ್ನ ವಿವಾಹ ಕಾಲದಲ್ಲಿ ತಾನೇ ಸ್ವಯಂ ಈ ಕ್ಷೇತ್ರದಲ್ಲಿ ನರಸಿಂಹ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಕೈಂಕರ್ಯಗಳನ್ನು ಮಾಡಿದನೆಂದು ಪ್ರತೀತಿ. ಅದೇ ದೇವಾಲಯದ ಒಂದು ಭಾಗದಲ್ಲಿ ಕಲ್ಯಾಣ ವೆಂಕಟರಮಣ ಸ್ವಾಮಿಯ ದೇಗುಲವಿರುವುದು ಅದಕ್ಕೆ ಸಾಕ್ಷಿ ಎಂಬಂತಿದೆ. ದೇವಾಲಯದ ಆವರಣದಲ್ಲಿ ಇರುವ ಬ್ರಹತ್ ಶಿಲಾ ಖಂಬಗಳು ಶ್ರೀನಿವಾಸನ ಕಲ್ಯಾಣೋತ್ಸವಕ್ಕೆ ಹಿಡಿದ ಕನ್ನಡಿಯಂತಿವೆ. ಹಿಂದಿನ ವೃತ್ತಾಂತವನ್ನು ನೆನೆಯುತ್ತ ದೇವರ ದರ್ಶನ ಮಾಡಿದಾಗ ನಮ್ಮಲ್ಲಿ ಏನೋ ಕಂಡರಿಯದ ಒಂದು ಪುಳಕ. ಜನ್ಮ ಸಾರ್ಥಕವಾಯಿತೆಂಬ ಭಾವ.

ಇಲ್ಲಿಂದ ಸರಿ ಸುಮಾರು ೨೦ಕಿ. ಮೀ ದೂರದಲ್ಲಿ "ಪಾವನ ನರಸಿಂಹ" ಸನ್ನಿಧಿಯಿದೆ. ಅಲ್ಲಿಗೆ ತಲುಪಲು ನಾವೆಲ್ಲರೂ ೪ ಜೀಪ್ ಗಳ ನೆರವು ಪಡೆದೆವು. ಬಹುಶಃ ಇಂತಹ ದುರ್ಗಮ ದಾರಿಯಲ್ಲಿ ಪ್ರಯಾಣ ಈ ಹಿಂದೆ ಮಾಡಿರಲಿಕ್ಕಿಲ್ಲ. ಆ ಪ್ರಕೃತಿಯ ಸವಾಲಿಗೆ ಎದೆ ಒಡ್ಡಿ ನಿಲ್ಲುವ ಧೀರ ಚಾಲಕರನ್ನು ನೋಡಿರಲಿಕ್ಕಿಲ್ಲ. ಯಾವ wonderla rides ಗಳು ಈ ದಾರಿಯ ಮುಂದೆ ನಾಚಿ ನೀರಾಗಬೇಕು. ಒಂದರ ಹಿಂದೆ ಒಂದು dry or water rides. Hmm water rides ಅನ್ನೋದಕ್ಕಿಂತ ಅನಿರುದ್ಧ ಹೇಳಿದಂತೆ ಅದು chocolate sauce ride. ಗಾಡಿ ಯಾವ ANGLE ನಲ್ಲಾದರೂ ವಾಲಬಹುದು. ಅದರ ಮುನ್ಸೂಚನೆ ಚಾಲಕನಿಗೂ ಇಲ್ಲ... ನಮಗಂತೂ ಇಲ್ಲವೇ ಇಲ್ಲ. ಹೀಗಿತ್ತು ನಮ್ಮ NH ೧(ನರಸಿಂಹ HOLY ಪಥ). ನಮ್ಮನ್ನು ಸುರಕ್ಷಿತವಾಗಿಟ್ಟ ಭಗವಂತನ ಕೃಪೆಗೆ ಹಾಗೂ ಆ ಚಾಲಕರ ಚಾಕುಚಕ್ಯತೆಗೆ ತಲೆದೂಗುವುದೊಂದೇ ನಮಗೆ ಉಳಿದದ್ದು. ನಮ್ಮ ಪಾಪಗಳನ್ನೆಲ್ಲ ಕಳೆಯಲು ಅವತರಿಸಿರುವ ಆ ನರಸಿಂಹ ಸ್ವರೂಪದ ದರ್ಶನ ಮಾತ್ರಕ್ಕೆ ನಾವು ಇಷ್ಟಾದರೂ ಕಷ್ಟ ಪಡದಿದ್ದರೆ ಹೇಗೆ ?ಮನಸ್ಸು ದೇವರ ಕರುಣೆಗೆ ಶರಣಾಯಿತು.

ಅಲ್ಲಿಂದ ಮುಂದೆ " ಭಾರ್ಗವ ನರಸಿಂಹ" ದೇವರ ದರುಶನಕ್ಕೆ ಹೊರಟೆವು. ಪರುಶುರಾಮದೇವರು ನರಸಿಂಹ ಅವತಾರದ ದರ್ಶನ ಮಾಡಲಪೇಕ್ಷಿಸಿದಾಗ ನರಸಿಂಹ ದೇವರು ಅವತರಿಸಿದ ಕ್ಷೇತ್ರವಿದು. ತುಸು ಕಾಲುದಾರಿಯ ಪ್ರಯಾಣ.. ಸುಮಾರು ನೂರು ಮೆಟ್ಟಿಲುಗಳನ್ನು ಏರಿ ದೇವರ ದರ್ಶನ ಪಡೆದೆವು..
ಆಗಲೇ ಊಟದ ಸಮಯ ಮೀರಿ ಹೋಗಿತ್ತು. "ಹಸಿದ ಹಾರವನನ್ನು ಕೆಣಕಬಾರದು" ಎಂಬಂತೆ ಯಾವುದೇ ಸದ್ದು ಗದ್ದಲವಿಲ್ಲದೆ ಎಲ್ಲರೂ ತಂಗುದಾಣದ ಊಟದ ಕೊಠಡಿಯಲ್ಲಿ ಕುಳಿತೆವು. ಶೀಘ್ರವಾಗಿ ಭೋಜನವನ್ನು ಮುಗಿಸಿ ಕೊಂಚ ವಿರಾಮದ ಬಳಿಕ ಇನ್ನೆರೆಡು ನರಸಿಂಹ ದೇವರ ದರ್ಶನಕ್ಕೆ ತೆರಳಿದೆವು .
ವಟವೃಕ್ಷದ ಕೆಳಗೆ ಅವತರಿಸಿರುವ " ಛತ್ರವಟ ನರಸಿಂಹ". ಸಂಗೀತಪ್ರಿಯನಾದ ಈ ನಾರಸಿಂಹನು ಹಾಹಾ ಹುಹು ಎಂಬ ಗಂಧರ್ವರ ಗಾನಕ್ಕೆ ಒಲಿದು ತಾಳ ಹಾಕುತ್ತಿರುವ ಭಂಗಿಯಲ್ಲಿ ಕುಳಿತಿರುವನೆಂದು ಪ್ರತೀತಿ.
ನಂತರ " ಯೋಗಾನಂದ ನರಸಿಂಹ" ನ ದರ್ಶನ ಪಡೆದೆವು . ನರಸಿಂಹನು ಸ್ವಯಂ ಪ್ರಹ್ಲಾದನಿಗೆ ಯೋಗಾಸನವನ್ನು ಹೇಳಿಕೊಟ್ಟ ಸ್ವರೂಪವಿದು. ದೇವರು ಯೋಗಮುದ್ರೆಯಲ್ಲಿ ಮಂದಸ್ಮಿತನಾಗಿ ಅವತರಿಸಿರುವನು. ಅಲ್ಲಿಂದ ಹೊರಟು ದಿಗುಲ ನರಸಿಂಹನ ದರ್ಶನವನ್ನು ಪುನಃ ಪಡೆದು...ರಾತ್ರಿಯ ಊಟದ ಶಾಸ್ತ್ರವನ್ನು ಮುಗಿಸಿ ಮರುದಿನದ ಪ್ರಯಾಣಕ್ಕೆ ಸಜ್ಜಾಗಲು ಬೇಗನೆ ನಿದ್ರಾದೇವಿಗೆ ಶರಣಾದೆವು.
NH ೧ ನ ಅನುಭವದ ನಂತರ NH2 ಪ್ರಯಾಣಕ್ಕೆ ಎಲ್ಲರು ಮಾನಸಿಕವಾಗಿ ಹಾಗು ದೈಹಿಕವಾಗಿ ಸಜ್ಜಾಗಿದ್ದೇವು. ಇವತ್ತಿನ ಯಾತ್ರೆಗೆ ಅವರವರ ಕೈ ಕಾಲುಗಳೇ
ಅವರವರ ಸಾರಥಿ. ವಾಹನ ದ್ವಿಚಕ್ರವೋ .....ಮೂರು ಚಕ್ರದ್ದೋ ... ನಾಲ್ಕು ಚಕ್ರದ್ದೋ ಎನ್ನುವ ಆಯ್ಕೆ ನಮ್ಮದಾಗಿತ್ತು.;)
ಬೆಟ್ಟದ ಕೆಳಗಿನ ಅಹೋಬಿಲ ನರಸಿಂಹ ದೇಗುಲದ ಬಳಿಯಿಂದ ಪ್ರಾರಂಭವಾಯ್ತು ನಮ್ಮ ಪ್ರಯಾಣ.

ತಂಪಾದ ವಾತಾವರಣ.. ಭವನಾಶಿನಿ ನದಿಯ ಝುಳು ಝುಳು ನಿನಾದ...ಮಧ್ಯೆ ಮಧ್ಯೆ ಎಲ್ಲರ ಮಾತಿನ ಚಟಾಕಿಗಳು....ಪ್ರಕೃತಿಯ ವಿಸ್ಮಯವನ್ನು ಆಸ್ವಾದಿಸುತ್ತ ನಡೆದೆವು. ಭವನಾಶಿನಿಯ ನೀರು ನಮ್ಮ ಪಾದಗಳಿಗೆ ಸೋಕಿದಾಗ ಹಿಂದಿನ ದಿನದ ಆಯಾಸವೆಲ್ಲಾ ಮಂಗ ಮಾಯಾ. ಗುಂಪಿನಲ್ಲಿ ಎಲ್ಲಾ ವಯೋಮಾನದವರೂ ಇದ್ದರು. ಎಲ್ಲರೂ ತಮ್ಮ ಸಾಮರ್ಥ್ಯ ಹಾಗೂ ಶಕ್ತಿಗನುಗುಣವಾಗಿ ತಮ್ಮ ತಮ್ಮ ವೇಗದಲ್ಲಿ ಬೆಟ್ಟ ಹತ್ತಿದೇವು. ಕಿರಿದಾದ ಕಾಲುದಾರಿ, ಈಗಲೋ ಆಗಲೋ ಬಿದ್ದೆವೋ ಎನ್ನುವಂತೆ ಒಂದರ ಮೇಲೊಂದು ನಿಂತಿರುವ ಕಲ್ಲುಗಳು..ಅವುಗಳಿಗೆ ಅನೂಕೂಲವಾಗುವಂತೆ ನಾವು ನಡೆಯಬೇಕು. ನಮ್ಮಿಂದ ಒಂದು ಕಲ್ಲು ಜರೀದರೂ ಅದು ಉರುಳುವ ಪರಿಯನ್ನು ನೋಡಿದರ್ ಎದೆ ಝಲ್ಲೆನ್ನುತ್ತಿತ್ತು. ನಮ್ಮ ಹಿಂದೆ ಇರುವವರಿಗೆ ತಗಲಿದರೇ ಏನು ಗತಿ..phew...

ಉಗ್ರಸ್ಥಂಭದ ಧ್ವಜ ಕಾಣುತ್ತಿದ್ದಂತೆ ಬಸವಳಿದಿದ್ದ ಜೀವಗಳು ಮತ್ತೆ ಚಿಗರಿದವು. ಭಗವಂತ ನರಸಿಂಹ ರೂಪದಿಂದ ಹೊರಬಂದ ಸ್ಥಂಬವದು. ಈ ವರೆಗೂ ನಮ್ಮಲ್ಲಿ ಬಹುಶಃ ಎಲ್ಲರ ಕಲ್ಪನೆಯಲ್ಲಿ ಇದ್ದಿದ್ದು ನಮ್ಮ ರಾಜಕುಮಾರ ನಟಿಸಿದ "ಭಕ್ತ ಪ್ರಹ್ಲಾದ" ಚಿತ್ರದ ಅರಮನೆ..ಖಂಬ..ಆದರೆ ವಾಸ್ತವವಾಗಿ ಹಿರಣ್ಯಕಶ್ಯಪುವಿನ ಅರಮನೆ ಅಂದರೆ ಇಡಿ ಆ ಕಾಡಿನ ಪ್ರದೇಶ. ಸ್ಥಂಬ ಎನ್ನುವುದು ಆ ಒಂದು ಬೆಟ್ಟವೇ. ಇದರ ಕಲ್ಪನೆ ಯಾವ ನಿರ್ದೇಶಕನ ಊಹೆಗೂ ಮೀರಿದ್ದು. ಆ ಉಗ್ರಸ್ಥಂಬದ ಮೇಲಂಚಿನಲ್ಲಿ ದೇವರ ಅವತರಿಸಿರುವ ಕುರುಹಾಗಿ ಪಾದಗಳನ್ನು ಪ್ರತಿಷ್ಟಾಪನೆ ಮಾಡಿದ್ದಾರೆ. ಸುತ್ತಲು ಪರ್ವತಗಳ ಬೃಹತ್ ಸಾಲು, ಸ್ಥಂಬದ ಕೆಳಗೆ ಎವೆ ಇಕ್ಕದೆ ನೋಡಿದರೂ ಕಾಣದ ಭೂಮಿ...ದಟ್ಟ ಕಾಡು....ಒಂದು ಕಡೆ ಮೈ ನವಿರೇಳಿಸುವ ಭಗವಂತ ಅವತಾರವೆತ್ತ ಸನ್ನಿವೇಶ...ಇನ್ನೊಂದು ಕಡೆ ಜೀವಕ್ಕೆ ಸವಾಲೊಡ್ಡುವ ಪ್ರಕೃತಿಯ ವಿಸ್ಮಯ....phew...ಬಣ್ಣಿಸಲಸದಳ..
"ಭಗವಂತನ ಕರುಣೆಗೆ ಎಣೆ ಇಲ್ಲ" ಎಂಬುವುದಕ್ಕೆ ನಾವೆಲ್ಲರೂ ಸುರಕ್ಷಿತವಾಗಿ ಮೇಲೆ ತಲುಪಿ...ಪ್ರದಕ್ಷಿಣೆ ನಮಸ್ಕಾರ ಹಾಕಿ...ಪುರುಷರೆಲ್ಲಾ ಮನ್ಯುಸುಕ್ತ ಪುರಶ್ಚರಣ..ಪೂಜಾ ಕೈಂಕರ್ಯಗಳನ್ನು ಮಾಡಿದ್ದು..ಜನ್ಮ ಸಾರ್ಥಕವಾಯಿತು.
ಗುರುತ್ವಾಕರ್ಷಣ ಶಕ್ತಿ ಗೆ ವಿರುದ್ಧವಾಗಿ ನಡೆಯುವುದು ಒಂದು ತೆರನಾದರೆ...ಮರಳುವುದು ಇನ್ನೊಂದು ತೆರ..ಅಲ್ಲಿಂದ ಕೆಳಗಿನವರೆಗೆ ಒಂದು ಜಾರುಬಂಡೆ ಇದ್ದಿದ್ದರೆ...ಎಂದು ಅಂದುಕೊಂಡವರಲ್ಲಿ ನಾವೂ ಒಬ್ಬರು. ನೀರಿನ ಝುಳು ಝುಳು ನಾದ ಕಿವಿಗೆ ಬಿದ್ದದ್ದೆ..ಎಲ್ಲಿಲ್ಲದ ಸಮಾಧಾನ..ಅಬ್ಬಾ!ನೀರಿನ ದಾಹ ತೀರಿದಷ್ಟು ಸಂತೋಷ. ೭೫ ರ young man ವಾಮಣ್ಣಜ್ಜಾ ಅವರು ನಿರಾಯಾಸವಾಗಿ ಬೆಟ್ಟ ಹತ್ತಿ ಇಳಿದಿದ್ದು ನಿಜಕ್ಕೂ ಶ್ಲಾಘನೀಯ...೬೯ ರ ಜಯರಾಮ್ ಮಾಮಾ..ಶರವೇಗದಲ್ಲಿ ಬೆಟ್ಟ ಹತ್ತಿ ಇಳಿಯುವ ಮಧ್ವೇಶ್ ಮಾಮಾ...ಇವರೆಲ್ಲರ ಮನೋಸ್ಥೈರ್ಯಕ್ಕೆ hats off...
ನಾವ್ಯಾರೂ "ಬಚೇಂದ್ರಿ ಪಾಲ್" ಅಲ್ಲದಿದ್ದರೂ ನರಸಿಂಹ ದೇವರ ಕೃಪೆಯಿಂದ ನಿರ್ವಿಘ್ನವಾಗಿ ಉಗ್ರಸ್ಥಂಬ ಏರಿದ್ದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಸಂಗತಿಯೇ ಸರಿ...
"ಅಹೋಬಲದಲ್ಲಿ ಬಾಹುಬಲ" ದ ಪರೀಕ್ಷೆ ನೀಡಿದ ನಮ್ಮ ಯಜಮಾನ ರಿಗೆ ತ್ರಿವಿಕ್ರಮನನ್ನ ಎತ್ತಿಕೊಳ್ಳುವಲ್ಲಿ ಕೈ ಜೋಡಿಸಿದ ಎಲ್ಲರಿಗೂ ನಮ್ಮ ಧನ್ಯವಾದಗಳು.

ಕೆಳಗಿಳಿದು ತುಂತುರು ಮಳೆಯಂತೆ ಭಾಸವಾಗುವ ಝರಿಯ ಒಡಲಿನಿಂದ ಹಾಯ್ದು "ಜ್ವಾಲಾ ನರಸಿಂಹ"ನ ದರ್ಶನಕ್ಕೆ ಮುಂದಾದೆವು. ತುಂತುರು ನೀರ ಹನಿಗಳು ಬಿಸಿಲಿನ ಬೆಗೆ ಇಂದ ಆದ ಆಯಾಸವನ್ನೂ ಬಾಯಾರಿಕೆಯನ್ನೂ ತಣಿಸಿದವು.

ಹಿರಣ್ಯಕಶ್ಯಪುವಿನ ಸಂಹಾರಕ್ಕೆ ಜ್ವಾಲಾಮುಖಿಯಂತೆ ಅವತರಿಸಿದ ಭಗವಂತ ಆತನ ಕರಳ ಬಗೆದು ಅದನ್ನು ತನ್ನ ಕೊರಳಿಗೆ ಹಾರವಾಗಿಸಿಕೊಂಡ ಸ್ಥಳವದು. ಗುಡಿಯಲ್ಲಿ ಮೂಲ ರೂಪದೊಂದಿದೆ ಬಲಭಾಗದಲ್ಲಿ ಆ ರೂಪವನ್ನು ನೋಡುತ್ತಾ ಕೈ ಮುಗಿದು ನಿಂತ ಪ್ರಹ್ಲಾದನ ಮೂರ್ತಿ, ಅಸುರನ ಜುಟ್ಟು ಹಿಡಿದಿರುವ ನರಸಿಂಹ ನ ಮೂರ್ತಿ, ತದನಂತರ ಅಸುರನಿಗೆ ಮುಕ್ತಿ ನೀಡಿ ತನ್ನಲಿ ಐಕ್ಯ ಮಾಡಿಕೊಂಡ ವಿಷ್ಣುವಿನ ಮೂರ್ತಿಯು ಇದೆ. ಪಕ್ಕದಲ್ಲೇ ರಕ್ತ ಕುಂಡವಿದೆ. ಅಸುರನನ್ನ ಸಂಹರಿಸಿ ಭಗವಂತ ತನ್ನ ರಕ್ತಸಿಕ್ತ ಕೈಗಳನ್ನು ಅಲ್ಲಿ ತೊಳೆದುಕೊಂಡನೆಂದು ಪ್ರತೀತಿ. ಅದಕ್ಕೆ ಪೂರಕವೆಂಬಂತೆ ಕುಂಡದ ನೀರು ನೆತ್ತರು ವರ್ಣವನ್ನು ಹೊಂದಿದೆ.
ಎಲ್ಲರೂ ಯಾತ್ರೆಗೆ ತಕ್ಕ ಲಘು ಉಪಹಾರವನ್ನು ವಾನರ ಸೈನ್ಯದಿಂದ ಕಣ್ಮರೆಯಾಗಿ ಅಲ್ಲೇ ಮುಗಿಸಿದೇವು. ವಾನರ ಸೈನ್ಯ ಇಲ್ಲಿ ಸಾಮಾನ್ಯದಲ್ಲ. ಇದರ ಅನುಭವ ಸ್ನೇಹಾಳಿಗೆ ಕೇಳಿ ತಿಳಿಯಬೇಕು. :) ತಮ್ಮ ಪ್ರಭುವಿನ ಸೇವೆಗೆ ಸದಾ ಸಿದ್ಧರಿರುವಂತೆ ಅಹೋಬಿಲದ ಉದ್ದಗಲಕ್ಕೂ ವಾನರ ಸೈನ್ಯ ಹರಡಿದೆ.
ಅಲ್ಲಿಂದ "ಮಾಲೋಲ ನರಸಿಂಹ" ನ ದರ್ಶನಕ್ಕೆ ಹೊರಟೆವು. ಹಿರಣ್ಯಕಶ್ಯಪುವಿನ
ಸಂಹಾರದ ನಂತರ ಉಗ್ರ ರೂಪದ ಭಗವಂತನನ್ನು ಲಕ್ಷ್ಮೀದೇವಿ ಶಾಂತಪಡಿಸಿದಳೆಂದು ಪ್ರತೀತಿ. ಇಲ್ಲಿ "ಮಾ-ಲಕ್ಷ್ಮೀ" ಲೋಲ ನಾಗಿ ನೆಲಸಿದ್ದಾನೆ.
ಅಲ್ಲಿಂದ ಕೆಳಗಿಳಿದು "ವರಾಹ ನರಸಿಂಹ"(ಕ್ರೋಢಾ ನರಸಿಂಹ )ನ ದರ್ಶನ ಪಡೆದೆವು. ವರಾಹ ಸ್ವರೂಪನಾಗಿ ಎಡ ಭುಜದ ಮೇಲೆ ಲಕ್ಷ್ಮೀ ದೇವಿಯನ್ನು ಕೂಡಿಸಿಕೊಂಡಿರುವ ಭಂಗಿಯಲ್ಲಿದ್ದಾನೆ. ಅಲ್ಲೇ ಮುಂದೆ ಹರಿಯುವ ನದಿ ಕೆಂಪು ವರ್ಣದಲ್ಲಿ ಗೋಚರಿಸುತ್ತದೆ, ಮೇಲೆ ರಕ್ತಕುಂಡದಿಂದ ನೀರು ಇಲ್ಲಿ ಹರಿದು ಬರುತ್ತಿರುವಂತೆ ಭಾಸವಾಗುತ್ತದೆ.
ಕೆಳಗಿನ ಅಹೋಬಿಲದ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆದಿರುವುದರಿಂದ ಕೇವಲ ಉತ್ಸವ ಮೂರ್ತಿಯ ದರುಶನ ಮಾತ್ರದಿಂದ ತೃಪ್ತರಾಗಬೇಕಾಯಿತು. "ನವ ನಾರಸಿಂಹ " ಕ್ಷೇತ್ರಗಳಲ್ಲಿ ಇದೇ ಮೊದಲನೆಯದಾಗಿದ್ದು ಭಗವಂತ ಉಗ್ರರೂಪದಲ್ಲಿ ಅವತರಿಸಿರುವನು.
ಕೊನೆಯದಾಗಿ "ಕಾರಂಜಾ ನರಸಿಂಹ ". ಭಗವಂತ ಆಂಜನೇಯನಿಗೆ ತನ್ನ ದಶಾವತಾರಗಳನ್ನೂ ಇಲ್ಲಿ ತೋರಿಸಿರುವನೆಂದು ಪ್ರತೀತಿ. ಅದಕ್ಕೆ ಕುರುಹಾಗಿ ರಾಮನ ಧನಸ್ಸು, ಕೃಷ್ಣನ ಚಕ್ರ, ತಲೆ ಮೇಲೆ ಶೇಷದೇವರನ್ನು ಕಾಣಬಹುದು.
ಹೀಗೆ ಎರಡು ದಿನಗಳ ಕಾಲಾವಧಿಯಲ್ಲಿ ನವ ನಾರಸಿಂಹ ಕ್ಷೇತ್ರದ ದಿವ್ಯ ಯಾತ್ರೆಯನ್ನು ಭವ್ಯವಾಗಿ ಮಾಡಿದೆವು. ಭಗವಂತ ಇಂತಹ ಘೋರಾರಣ್ಯದಲ್ಲಿ ಯಾಕೆ ನೆಲೆಸಿರುವನೆಂದು ನಮ್ಮಲ್ಲಿ ಸಂದೇಹ ಬಂದಿದ್ದುಂಟು. "ಸಿಂಹಕ್ಕೆ ಯೋಗ್ಯವಾದ" ಸ್ಥಳದಲ್ಲೇ ಅವನು ನೆಲೆಸಿರುವನು ಎನ್ನುವುದು ಅತಿ ಸಾಮಾನ್ಯ ವಿವರಣೆಯಾದರೂ ಸರ್ವತ್ರವ್ಯಾಪ್ತನಾದ ಭಗವಂತನಿಗೆ ಯಾವ ಅರಣ್ಯ ಯಾವ ನಗರ :)
ಸ್ವಯಂಭೂ ನರಸಿಂಹ ದೇವಾಲಯಗಳನ್ನು ದರ್ಶಿಸಿ ಜೀವ ಧನ್ಯವಾಯಿತು. ಈ ಲೇಖನದ ಪ್ರತಿಯೊಂದು ಪದ ಬರೆಯುವಾಗಲೂ ನಮ್ಮ ಯಾತ್ರೆಯ ಕ್ಷಣಗಳು ಮರುಕಳಿಸಿದಂತೆ ಆದವು. ಅದಕ್ಕೆ ಲೇಖನದ ಉದ್ದ ನನ್ನ ಕೈ ಮೀರಿದೆ. :)
ಯಾತ್ರೆಯನ್ನು ಸುರಳಿತವಾಗಿ, ಸುಸೌಕರ್ಯವಾಗಿ ನೆರವೇರಿಸಿದ ಮಧ್ವೆಶ್ ಮಾಮಾ , ಸುರೇಶ್ ಮಾಮಾ ಹಾಗು ರಮೇಶ್ ಮಾಮಾ ರಿಗೆ ನಮ್ಮೆಲ್ಲರ ಅನಂತ ಧನ್ಯವಾದಗಳು.
ಹೀಗೆ ನೀವು ನಿಮ್ಮ ಅನುಭವದಿಂದ ನಮಗೆ ಹೊಸ ಹೊಸ ಯಾತ್ರೆಗಳನ್ನು ಮಾಡಿಸುತ್ತ ನಿಮ್ಮ ಪುಣ್ಯದೊಂದಿಗೆ ಕೊಂಚ ನಮ್ಮ ಪುಣ್ಯಾನೂ ವೃದ್ಧಿಸುತ್ತಿರಿ .. :)
ಬರಹದಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ಸ್ ತುಂಬಾ ಆಗಿರಬಹುದು .. ಮಾಹಿತಿಯ್ಲಲೂ ಏನಾದರೂ ಚ್ಯುತಿಯಾಗಿದ್ದಲ್ಲಿ ಈ ಕಿರಿಯಳಲ್ಲಿ ತಮ್ಮ ಕ್ಷಮೆಯಿರಲಿ.
"ನಾಹಂ ಕರ್ತಾ ಹರಿಃ ಕರ್ತಾ"

ಹರಯೇ ನಮಃ. ಯಾತ್ರೆಯ ರೋಚಕ ಕ್ಷಣಗಳನ್ನು ಮತ್ತೊಮ್ಮೆ ಅನುಭವಿಸಿದಂತೆ ಇದೆ ನಿನ್ನ ಬರಹದ ಲಾಲಿತ್ಯ!ಅಲ್ಲಿ ನಾವು ವೀಕ್ಷಿಸದಿದ್ದ ನೋಟಗಳನ್ನೂ ಎಳೆ ಎಳೆಯಾಗಿ ತಿಳಿ ತಿಳಿಯಾಗಿ ಸುಳಿ ಸುಳಿಯಾಗಿ ತಿಳಿಸಿದ ನಿನ್ನ ಬರಹವು ಮುದ ಕೊಡುತ್ತದೆ! ಇದಕ್ಕಾಗಿ ಅಭಿನಂದನೆಗೆ ಅರ್ಹಳಾಗುತ್ತೀಯಾ. ಈ ಯಾತ್ರೆಯ ಎಲ್ಲರಿಗೂ ಯಾಕೆ ಇಷ್ಟವಾಯಿತೆಂದರೆ (ನನ್ನ ಅನಿಸಿಕೆ) ಅಲ್ಲಿ ಕೇವಲ ಬೆಟ್ಟ-ಕಾಡು-ನದಿ ಇಷ್ಟೇ ಇಲ್ಲ. ಸಾಕ್ಷಾತ್ ನರಸಿಂಹನ ಸನ್ನಿಧಾನ ಅಲ್ಲಿರುವ ಕಣ ಕಣಗಳಲ್ಲಿಯೂ ಇದ್ದುದರಿಂದಲೇ ನಮಗದು ಕೇವಲ ಚಾರಣವಷ್ಟೇ ಅನಿಸದೇ ಸಾಧನೆಯ ಬೆಟ್ಟವನ್ನು ಕ್ರಮಿಸುವ ದಾರಿಯೆಂದೇ ಭಾಸವಾಗುತ್ತದೆ.ಅವರವರ ಭಾವಕ್ಕೆ ತಕ್ಕಂತೆ ಆನಂದದ ಭರಪೂರತೆ ದೊರಕಿದೆ. ಅವರವರ ಭಕ್ತಿಗನುಸಾರವಾಗಿ ಪುಣ್ಯಸಾಧನೆಯೂ ಆಗಿದೆ. ಪ್ರಾಯಶಃ ಈ ಯಾತ್ರೆಯ ದುರ್ಗಮತೆಯ ಪರಿಕಲ್ಪನೆಯನ್ನು ಹಾಗೂ ಧನ್ಯತೆಯ ಪರಾಕಾಷ್ಠೆಯನ್ನು ಯಾರೂ ಊಹಿಸಿರಲಿಕ್ಕಿಲ್ಲ! ಇದೇ ನರಸಿಂಹದೇವರ ಅನುಗ್ರಹ ಹಾಗೂ ಕಾರುಣ್ಯ. ಒಟ್ಟಾರೆ ನಿಮಗೆಲ್ಲ ಈ ಯಾತ್ರೆಯು ಖುಶಿ ಕೊಟ್ಟಿದೆಯೆಂದು ಭಾವಿಸುವೆ.ಚಿ.ಮೇಧಾಳ ವಿವಾಹದ ತರುವಾಯ ಮತ್ತೆ ಭಗವಂತನ ಸಾನ್ನಿಧ್ಯವನ್ನು ಅನುಭವಿಸುವ ಯಾತ್ರೆಯನ್ನು ಆಯೋಜಿಸುವ ಆಲೋಚನೆಯಿದೆ.ಅವನೇ ನಿಂತು ಮಾಡಿಸುತ್ತಾನೆ. ಅಲ್ಲಿಯವರೆಗೆ ನಿಮಗೆ ಆತ್ಮೀಯ ಅಭಿನಂನೆಗಳು. ನಿನ್ನ ಸುಲಲಿತ-ಓಘಪೂರ್ಣ ಬರಹಕ್ಕೆ ಶ್ಲಾಘನೆ ತಿಳಿಸದಿದ್ದರೆ ತಪ್ಪಾಗುತ್ತದೆ.
ReplyDelete