ಹಿಂದೊಮ್ಮೆ ಯಜ್ಞ ಮಾಡುವ ಸಮಯದಲ್ಲಿ ಹವಿಸ್ಸನ್ನು ಯಾರಿಗೆ ಅರ್ಪಿಸಬೇಕು ಎನ್ನುವ ಪ್ರಶ್ನೆ ಬಂದಿತು. ಆಗ ನಾರದರು ಭೃಗು ಋಷಿಗಳಿಗೆ ಸೂಚಿಸಿದಂತೆ, ಭೃಗು ಋಷಿಗಳು ಒಮ್ಮೆ ಬ್ರಹ್ಮ, ವಿಷ್ಣು , ಮಹೇಶ್ವರರಲ್ಲಿ ಯಾರು ಶ್ರೇಷ್ಟರು ಎಂದು ತಿಳಿಯಲು ಮೂರು ಲೋಕಕ್ಕೆ ಹೋಗುವ ನಿರ್ಧಾರ ಮಾಡಿದರು. ಮೊದಲು ಕೈಲಾಸಕ್ಕೆ ಮಹೇಶ್ವರನ ಬಳಿ ಹೋದಾಗ ಅವನು ಇವರು ಬಂದಿದ್ದನ್ನು ಗಮನಿಸದಿದ್ದಕ್ಕೆ "ನಿನಗೆ ಭೂಮಿ ಮೇಲೆ ಲಿಂಗ ಪೂಜೆ ಮಾತ್ರ ಲಭಿಸುವುದೆಂದು" ಶಾಪವಿತ್ತರು. ಬ್ರಹ್ಮಲೋಕಕ್ಕೆ ಹೋದಾಗ ಬ್ರಹ್ಮ ಇವರನ್ನು ನಿರ್ಲಕ್ಷಿಸಿದ ಕಾರಣ "ನಿನಗೆ ಮೂರ್ತಿ ಪೂಜೆ ಸಲ್ಲದು" ಎಂದು ಶಾಪವಿತ್ತರು. ಇನ್ನೂ ವಿಷ್ಣು ಸ್ಥಾನ ವೈಕುಂಠಕ್ಕೆ ಹೋದಾಗ, ವಿಷ್ಣುಗೆ ಅವರ ಆಗಮನದ ಆಭಾಸವಾಗಿದ್ದರೂ ನಿದ್ರಾವಸ್ಥೆಯಲ್ಲಿರುವಂತೆ ನಟಿಸುತ್ತಿದ್ದನು. ಇದನ್ನು ಕಂಡು ಕೆಂಡಾಮಂಡಲರಾದ ಮುನಿಗಳು ವಿಷ್ಣುವಿನ ವಕ್ಷಸ್ಥಳಕ್ಕೆ ಒದೆಯುತ್ತಾರೆ. ತಕ್ಷಣ ವಿಷ್ಣು ನನ್ನ ಅಪರಾಧವನ್ನು ಮನ್ನಿಸಿ ಎಂದು ಮುನಿಗಳ ಚರಣಕ್ಕೆರಗಿ, ಅವರ ಪಾದದ ಅಡಿ ಇದ್ದ ಅಹಂಕಾರದ ಕಣ್ಣನ್ನು ಕಿತ್ತೆಸೆಯುತ್ತಾನೆ. ಈ ಕಡೆ ಲಕ್ಷ್ಮೀದೇವಿ ತನ್ನ ವಾಸಸ್ಥಳಕ್ಕೆ ಮುನಿಗಳು ಅವಮಾನ ಮಾಡಿದರೂ ತನ್ನ ಸ್ವಾಮಿ ಅವರ ಪಾದಗಳಿಗೆ ಎರಗಿದ್ದನ್ನು ಕಂಡು ಮುನಿಸಿಕೊಂಡು ಭೂಲೋಕಕ್ಕೆ ಬಂದು ಬಿಡುತ್ತಾಳೆ. ಅವಾಗ ಮುನಿಗಳು ಶಾಂತ ಸ್ವರೂಪರಾಗಿ, ತಮ್ಮ ಉದ್ಧಟ ತನಕ್ಕೆ ಪಶ್ಚಾತಾಪ ಪಡುತ್ತಾರೆ. ಆಗ ವಿಷ್ಣು "ನೀವು ಪರಿತಪಿಸುವ ಅಗತ್ಯವಿಲ್ಲ, ನಾನು ತಾಯಿ ಯಶೋಧೆಗೆ ಹಾಗು ದೇವಿ ವೇದವತಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಭೂಲೋಕದಲ್ಲಿ ಅವತರಿಸಲು ನೀವು ಕಾರಣ ನಿಮಿತ್ತರು ಅಷ್ಟೇ ". ಮುಂದೆ ಭಗವಾನ್ ವಿಷ್ಣುವು ಶ್ರೀನಿವಾಸನಾಗಿ ಅವತರಿಸಿ ಬಕುಳೆಯ ರೂಪದಲ್ಲಿ ತಾಯಿ ಯಶೋಧೆಗೆ ಕೊಟ್ಟ ಮಾತನ್ನು, ಪದ್ಮಾವತಿಯ ಕೈ ಹಿಡಿದು ವೇದವತಿಗೆ ಕೊಟ್ಟ ಮಾತನ್ನೂ ಈಡೇರಿಸಿದನು. ವಿಷ್ಣುವು ಭೃಗು ಋಷಿಗಳಿಗೆ "ಲೋಕ ಕಲ್ಯಾಣಕ್ಕಾಗಿ ತಾವು ಭೂಲೋಕದಲ್ಲಿ ಅವತರಿಸುವ ಅಗತ್ಯವಿದೆ ಎಂದನು ".
ಸ್ವಾಮಿಯ ಆಜ್ಞೆಯಂತೆ ಭೃಗು ಋಷಿಗಳು ಮೊದಲು ಪುರಂದರ ದಾಸರ ಮನೆಯಲ್ಲಿ ಕರುವಾಗಿ ಜನಿಸಿದರು. ನಂತರ ಅವರ ಎರಡನೆಯ ಮಗ "ಮಧ್ವ ವಿಠ್ಠಲ" ನಾಗಿ ಜನಿಸಿದರು. ಪುರಂದರ ದಾಸರು ೪,೨೫,೦೦೦ (ಅಥವಾ ೪,೭೫,೦೦೦ ಎಂದು ವಿವಿಧ ಅಭಿಪ್ರಾಯಗಳಿವೆ) ಕ್ರತಿಗಳನ್ನು ರಚಿಸಿದರು. ೫,೦೦,೦೦೦ ಕೃತಿಗಳನ್ನು ರಚಿಸಬೇಕೆನ್ನುವುದು ಅವರ ಸಂಕಲ್ಪವಾಗಿತ್ತು. ಉಳಿದ ಕ್ರತಿಗಳು ತಮ್ಮ ಮಗನಿಂದ ರಚನೆಯಾಗುವವು ಎಂದರು. ಆ ಕಾರ್ಯ ಸಂಪೂರ್ಣವಾಗಲೆಂದೇ "ಚೀಕಲಪರವಿ" ಎಂಬ ಗ್ರಾಮದಲ್ಲಿ ದಾಸಪ್ಪನೆಂಬ ಹೆಸರಿನಿಂದ ಪುರಂದರ ದಾಸರ ಮಗ ಮತ್ತೆ ಜನಿಸಿದರು. ೩೨ ವರ್ಷಗಳ ಕಾಲ ಪ್ರಾರಭ್ಧ ಕರ್ಮಗಳನ್ನು ಅನುಭವಿಸುತ್ತ, ಬಡವ ಸಹಜ ಜೀವನವನ್ನು ನಡೆಸುತ್ತಿದ್ದರು. ಹೀಗೊಂದು ದಿನ ರಾತ್ರಿ ಕನಸಿನಲ್ಲಿ ಪುರಂದರ ದಾಸರು ನಾರದರ ತಂಬೂರಿಯನ್ನು ದಾಸಪ್ಪನಿಗೆ ಕೊಟ್ಟಂತೆ ಆಯಿತು. "ಚಿಪ್ಪಗಿರಿಯ ವಿಜಯದಾಸರ ಕಟ್ಟೆಯಲ್ಲಿ" ಈ ತಂಬೂರಿಯನ್ನು ಈಗಲೂ ನೋಡಬಹುದು . ಹಾಗೂ ಸತ್ಯಭೋಧ ಸ್ವಾಮಿಗಳ ಪಾದುಕೆಗಳು ಅಲ್ಲಿವೆ
ವೇದವ್ಯಾಸರು ಇವರ ನಾಲಿಗೆಯ ಮೇಲೆ "ವಿಜಯ" ಎಂದು ಬರೆದರು. ಇದೆ ಮುಂದಿನ ದಾಸಸಾಹಿತ್ಯದ ಬೆಳವಣಿಗೆಗೆ ನಾಂದಿಯಾಯಿತು. ಅಂದಿನಿಂದ ದಾಸಪ್ಪನು "ವಿಜಯ ವಿಠ್ಠಲ" ನಾಮಾಂಕಿತದೊಂದಿಗೆ ಕ್ರತಿಗಳನ್ನು ರಚಿಸಲು ಆರಂಭಿಸಿದರು. ಇವರೇ "ವಿಜಯದಾಸರು". ದಾಸ ಸಾಹಿತ್ಯದ ಅಭಿವೃದ್ಧಿಯ ಚುಕ್ಕಾಣಿ ಹಿಡಿದರು. ಇವರ ಶಿಷ್ಯ ವೃಂದದಲ್ಲಿ ಪ್ರಮುಖರು ಗೋಪಾಲದಾಸರು. ಅಲ್ಲದೆ ಹಲವು ಸುಧಾ ಪಂಡಿತರೂ ಇವರ ಶಿಷ್ಯರಾಗಿ ದಾಸ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಶ್ರೀಪಾದರಾಜರು ಪ್ರತಿಷ್ಠಾಪಿಸಿದ ನರಸಿಂಹ ದೇವರು
ವಿಜಯದಾಸರು ಈ ಮರದ ಅಡಿಯಲ್ಲಿ ಕುಳಿತು ಕ್ರತಿಗಳನ್ನು ರಚಿಸಿದ್ದರು. ಅವರೇ ಪ್ರತಿಷ್ಠಾಪಿಸಿದ ಪ್ರಾಣದೇವರ ವಿಗ್ರಹ ಇಲ್ಲಿದೆ. ಒಂದು ಅಂಶದಿಂದ ತಾವು ಸದಾ ಈ ಜಾಗದಲ್ಲಿ ಇರುವೆನೆಂದು ಹೇಳಿದ್ದರು. ಅದಕ್ಕೆ ಆ ಮರದ ಭಾಗಕ್ಕೆ ನಿತ್ಯ ಪೂಜೆ ಸಲ್ಲುತ್ತದೆ
ಚೀಕಲಪರವಿಯಲ್ಲಿ ಶ್ರೀನಿವಾಸಾಚಾರ್ ಎಂಬ ಸುಧಾ ಪಂಡಿತರಿದ್ದರು. ಒಮ್ಮೆ ವಿಜಯದಾಸರು ಆಚಾರ್ಯರನ್ನು ತಮ್ಮ ಮನೆಗೆ ತೀರ್ಥ ಪ್ರಸಾದಕ್ಕೆ ಬರುವಂತೆ ಆಹ್ವಾನಿಸಿದರು. ಆಚಾರ್ಯರು ಮನೆಗೆ ಬಂದು ತಮ್ಮ ಮಡದಿಗೆ ಹೇಳಿದರು "ಸುಧಾ ಪಂಡಿತನಾದ ನಾನು ಆ ಯಖಶ್ಚಿತ್ ದಾಸನ ಮನೆಗೆ ತೀರ್ಥ ಪ್ರಸಾದಕ್ಕೆ ಹೋಗುವುದೇ.... ಅಸಾಧ್ಯ...ನೀನೇ ಏನಾದರು ನೆಪ ಹೇಳಿ ಬಿಡು ಎಂದರು ". ಇತ್ತ ಮಂಗಳಾರತಿಯ ಸಮಯವಾದರೂ ಆಚಾರ್ಯರು ಬರದಿದ್ದನ್ನು ಕಂಡು ವಿಜಯದಾಸರು ತಮ್ಮ ಶಿಷ್ಯ ಗೋಪಾಲದಾಸರಿಗೆ ವಿಚಾರಿಸಿಕೊಂಡು ಬರಲು ಕಳುಹಿದರು. ಆಚಾರ್ಯರ ಮಡದಿ "ಆಚಾರ್ಯರ ಊಟವಾಗಿ ಮಲಗಿದ್ದಾರೆ. ಅವರಿಗೆ ೧೧ ಘಂಟೆ ಮಿಕ್ಕಿದ ಮೇಲೆ ಊಟ ಮಾಡಿದರೆ ಹೊಟ್ಟೆ ನೋವು ಬರುತ್ತದೆ. ಅದಿಕ್ಕೆ ಭೋಜನ ಮುಗಿಸಿದರು." ಎಂದು ಹೇಳಿದರು. ಗೋಪಾಲದಾಸರು ಮರಳಿ ಬಂದು ವಿಜಯದಾಸರಿಗೆ ವಿಷಯವನ್ನು ತಿಳಿಸಿದರು. ವಿಜಯದಾಸರು ಅಪರೋಕ್ಷ ಜ್ಞಾನಿಗಳು. ಅವರಿಗೆ ಸತ್ಯ ತಿಳಿದಿತ್ತು. ಇತ್ತ ಮಲಗಿದ ಶ್ರೀನಿವಸಾಚಾರ್ಯರು ತೀವ್ರ ಉದಕ ಬೇನೆಯಿಂದ ನಿದ್ದೆ ಇಂದ ಎಚ್ಚೆತ್ತರು. ಯಾವುದೇ ಮನೆ ಮದ್ದಿನಿಂದ ನೋವು ಶಮನವಾಗಲಿಲ್ಲ. ಈ ಶ್ರೀನಿವಸಾಚಾರ್ಯರು ಬೇರೆ ಯಾರು ಅಲ್ಲ "ಸಹ್ಲಾದ"ರು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಪ್ರಹ್ಲಾದರಾದಾಗ ಶ್ರೀನಿವಾಸಚಾರ್ಯರು ಅವರ ಸಹೋದರ ಸಹ್ಲಾದರು. ಆಚಾರ್ಯರು ನೋವಿನ ಶಮನಕ್ಕೆ ರಾಯರ ಮೊರೆ ಹೊಕ್ಕರು. ಅದಕ್ಕೆ ರಾಯರು ನೀನು ಎಲ್ಲಿ ತಪ್ಪೆಸಗಿದ್ದಿಯೋ ಅಲ್ಲಿಗೆ ಹೋಗಿ ಕೇಳು, ಪರಿಹಾರ ದೊರೆಯುತ್ತದೆ ಎಂದರು. ಕೂಡಲೇ ಆಚಾರ್ಯರು ಗೋಪಾಲದಾಸರ ಬಳಿಗೆ ತೆರಳಿದರು. ಗೋಪಾಲದಾಸರು ವಿಜಯದಾಸರಿಂದ ಅಪರೋಕ್ಷ ಸಮ್ಮತಿಯನ್ನು ಪಡೆದು ಅವರ ಅನುಮತಿಯಂತೆ ಧನ್ವಂತರಿ ಸುಳಾದಿ ಹೇಳುತ್ತಾ ಭಕ್ಕರಿಯಲ್ಲಿ ಔಷಧಿಯನ್ನು ಇಟ್ಟು ಆಚಾರ್ಯರಿಗೆ ಕೊಟ್ಟರು. ಅದೂ ನಿಷ್ಪ್ರಯೋಜಕವಾಯಿತು. ತಕ್ಷಣ ಗೋಪಾಲದಾಸರೊಂದಿಗೆ ತಿರುಪತಿಗೆ ತೆರಳುತ್ತಾರೆ. ಅಲ್ಲಿ ಸ್ವಯಂ ತಿಮ್ಮಪ್ಪನೇ ಗೋಪಾಲದಾಸರ ರೂಪದಲ್ಲಿ ಬಂದು ಆಚಾರ್ಯರಿಗೆ ಔಷಧಿಯನ್ನುಇತ್ತನು. ಆದರೂ ಅವರ ನೋವು ಶಮನವಾಗಲಿಲ್ಲ. ಇದು ಅವರ ಅಂತ್ಯಕಾಲದ ಮುನ್ಸೂಚನೆಯೆಂದು ವಿಜಯದಾಸರು ಅರಿತು, ಗೋಪಾಲದಾಸರಿಗೆ ತಮ್ಮ ಆಯಸ್ಸಿನಿಂದ ೪೦ ವರ್ಷಗಳನ್ನು ಆಚಾರ್ಯರಿಗೆ ಕೊಡುವಂತೆ ತಿಳಿಸದರು. ಹೀಗೆ ಶ್ರೀನಿವಾಸಚಾರ್ಯರು ಮರುಜನ್ಮ ಪಡೆದರು. ತಕ್ಷಣ ಅವರು ವಿಜಯದಾಸರ ಶಿಷ್ಯರಾಗಿ ತಮಗೆ ಅಂಕಿತನಾಮವನ್ನು ನೀಡುವಂತೆ ಕೋರಿದರು. ಆಗ ವಿಜಯದಾಸರು "ಪಂಢರಪುರಕ್ಕೆ ತೆರಳಿ..ನಿಮ್ಮ ಅಂಕಿತ ನಿಮಗೆ ಅಲ್ಲೇ ದೊರೆಯುತ್ತದೆ ಎಂದರು". ಆಚಾರ್ಯರು ಪಂಢರಪುರಕ್ಕೆ ತಮ್ಮ ಅಂಕಿತವನ್ನರಸಿ ಹೊರಟರು. ಅಲ್ಲಿಯ ನದಿಯ ಬಂಡೆಯ ಮೇಲೆ "ಜಗನ್ನಾಥ" ಎಂದು ಬರೆದಿತ್ತು.. ಅದೇ ಅವರ ಅಂಕಿತವಾಯಿತು. ವಿಜಯದಾಸರನ್ನು ಹೊಗಳಿ "ರತುನ ದೊರಕಿತು ...ವಿಜಯದಾಸರೆಂಬ ರತುನ ದೊರಕಿತು" ಎಂಬ ಕೃತಿಯನ್ನು ರಚಿಸಿದರು. ಮುಂದೆ "ಹರಿಕಥಾಮೃತ ಸಾರ" ವನ್ನು ರಚಿಸಿದರು. ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಅವರ ಸನ್ನಿಧಾನವಿದೆ. .
ಒಂದು ದಿನ ಪಾಠ ಮಾಡುತ್ತಿದ್ದ ವಿಜಯದಾಸರು ತ್ವರಿತದಲ್ಲಿ ಎಲ್ಲಿಗೋ ಹೊರಟು ಹೋದರು. ಗೋಪಾಲದಾಸರು ತಕ್ಷಣ ಕಾರಣ ಅರಿತರು. ಕಲ್ಲೂರು ಸುಬ್ಬಣ್ಣಾಚರ್ ಮನೆಯಲ್ಲಿ ಸುಧಾ ಮಂಗಳವಿತ್ತು. ಆಚರ್ಯರೂ ಸ್ವಯಂ ಮಹಾ ಸುಧಾ ಪಂಡಿತರು. ೭ ದಿನದ ಸುಧಾಪಾಠದ ತರುವಾಯ ಅಂದು ಸುಧಾಮಂಗಳವಿತ್ತು . ಎಲ್ಲರಿಗೂ ವಿಶೇಷ ಮಂಡಿಗೆ ಭೋಜನದ ಆಮಂತ್ರಣವಿತ್ತು. ಹೀಗಿರುವಾಗ ಅವರ ಮನೆ ಅಡಿಗೆಯವನು ನಾಪತ್ತೆ ಆಗಿದ್ದ. ಸುಬ್ಬಣ್ಣಾಚಾರ್ ದಂಪತಿಗಳು ಚಿಂತಾಕ್ರಾಂತರಾಗಿದ್ದರು. ಅಡುಗೆಯವನಿಗೆ ಮೈಲಿಗೆ ಬಂದಿರುವ ವಿಷಯ ವಿಜಯದಾಸರಿಗೆ ತಿಳಿಯಿತು. ಅದಿಕ್ಕೆ ಅವರು ಅಡಿಗೆಯವನಾಗಿ ಅಲ್ಲಿಗೆ ತೆರಳಿದರು. ಆಚಾರ್ಯರ ಹೆಂಡತಿ ಕೆಲಸ ಶುರು ಮಾಡುವಂತೆ ಹೇಳಿದರು. ಆ ಸಮಯದಲ್ಲಿ ಆಚಾರ್ಯರು ಯಾವುದೋ ಒಂದು ಕಠಿಣ ಶ್ಲೋಕದ ಅರ್ಥವನ್ನು ವಿಸ್ತಾರ ಮಾಡುವ ಪ್ರಯತ್ನದಲ್ಲಿದ್ದರು. ಅದನ್ನು ಮಂಗಳದ ಸಭೆಯಲ್ಲಿ ಹೇಳಬೇಕಾಗಿತ್ತು. ವಿಜಯದಾಸರು ಆಚಾರ್ಯರನ್ನು ಕುರಿತು "ನನ್ನಿಂದೇನಾದರು ಸಹಾಯವಾದಿತೇ ಆಚಾರ್ಯರೇ? " ಎಂದು ಕೇಳಿದ್ದಕ್ಕೆ ಕೋಪಿಸಿಕೊಂಡ ಆಚಾರ್ಯರು "ನಿನ್ನ ಕೆಲಸ ನೋಡಿಕೋ ಹೋಗು" ಎಂದು ಗದರಿದರು.
೩೦೦೦ ಮಂಡಿಗೆಗಳು ಕ್ಷಣಾರ್ಧದಲ್ಲಿ ತಯಾರಾದವು. ಸಭೆ ಪ್ರಾರಂಭವಾಯಿತು. ಆಚಾರ್ಯರು ಸುಧಾ ಪಾಠ ಮಾಡುವಾಗ ಆ ಕಠಿಣ ಶ್ಲೋಕವನ್ನು ಬಿಟ್ಟು ಮುಂದಿನ ಶ್ಲೋಕದ ವಿವರಣೆಯನ್ನು ಮುಂದುವರಿಸಿದರು. ಅಲ್ಲೇ ಒಂದು ಮೂಲೆಯಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ವಿಜಯದಾಸರು ತಕ್ಷಣ "ಆಚಾರ್ಯರೇ ಆ ಶ್ಲೋಕದ ವಿವರಣೆಯನ್ನು ತಿಳಿಸಿ ..ಅದು ಬಹಳ ಮಹತ್ವದ ಶ್ಲೋಕ ಎಂದರು". ಇದರಿಂದ ಕೋಪೋದ್ರೇಕರಾದ ಆಚಾರ್ಯರು "ಏನು ನಿನ್ನ ಉದ್ಧಟತನ ...ನೀನೇ ಅದನ್ನು ವಿವರಿಸು ನೋಡೋಣ ಎಂದರು". ಆಗ ವಿಜಯದಾಸರು ಅಲ್ಲಿಯೇ ಸಭೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮೂಗ ಹುಡುಗನನ್ನು ಕರೆದು ಅವನ ತಲೆಯ ಮೇಲೆ ಕೈ ಇಟ್ಟು ಶ್ಲೋಕದ ಅರ್ಥ ವಿವರಿಸು ಎಂದರು. ಆ ಹುಡುಗ ಕಠಿಣ ಶ್ಲೋಕದೊಂದಿಗೆ ಆಚಾರ್ಯರು ೭ ದಿನ ಮಾಡಿದ್ದ ಸಂಪೂರ್ಣ ಸುಧಾ ಪಾಠವನ್ನೂ ಹೇಳಿದನು. ಈಡಿ ಸಭೆ ದಿಗ್ಬ್ರಮೆಗೊಂಡಿತು. ಅದೇ ಸಮಯಕ್ಕೆ "ಆದೋನಿಯ ದೀವಾನರು" ಅಲ್ಲಿಗೆ ಆಗಮಿಸಿದರು. ಆಚಾರ್ಯರು ಭರದಿಂದ ಹೋಗಿ ಅವರನ್ನು ಸ್ವಾಗತಿಸಿ ಬಂದ ಕಾರಣವನ್ನು ಕೇಳಿದಾಗ "ವಿಜಯದಾಸರ ದರುಶನಕೆ ಬಂದಿರುವುದಾಗಿ ತಿಳಿಸದರು". ದಿವಾನರು ವಿಜಯದಾಸರ ಶಿಷ್ಯರಲ್ಲೊಬ್ಬರು. ಆಚಾರ್ಯರು "ವಿಜಯದಾಸರು ಸಭೆಯಲ್ಲಿರುವರೇ ಎಂದು ಆಶ್ಚರ್ಯದಿಂದ ಕೇಳಿದರು". ಅಡಿಗೆ ಮಾಡಲು ಬಂದವರೇ ವಿಜಯದಾಸರೆಂದು ತಿಳಿದಾಗ ತಮ್ಮ ತಪ್ಪಿನ ಅರಿವು ಅವರಿಗಾಯಿತು. ಕೂಡಲೇ ಅವರ ಚರಣಕ್ಕೆರಗಿ ಶಿಷ್ಯನನ್ನಾಗಿ ಮಾಡಿಕೊಳ್ಳುವಂತೆ ಕೋರಿದರು. "ವ್ಯಾಸ ವಿಠ್ಠಲ " ಎಂಬ ಅಂಕಿತ ನಾಮವನ್ನು ಪಡೆದರು. ವಿಜಯ ರಾಯರ ಕವಚ "ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೊ.... " ವನ್ನ್ನು ರಚಿಸಿದರು.
ವಿಜಯದಾಸರು ಒಮ್ಮೆ ತಿರುಪತಿಗೆ ಹೋದಾಗ ಭಕ್ತರ ಮಹಾಪೂರವೇ ಸೇರಿತ್ತಂತೆ. ದರುಶನ ಸಿಗುವುದೇ ಕಷ್ಟವೆನಿಸಿತಂತೆ. ಸಮೂಹವನ್ನು ನೋಡಿ ದಾಸರು "ನಿನ್ನ ದರುಶನಕೆ ಬಂದವನಲ್ಲವೋ ...... " ಎಂಬ ಕೃತಿಯನ್ನು ರಚಿಸಿದರು
ವಿಜಯದಾಸರಿಂದ ಇನ್ನೂ ಇಂತಹ ಹತ್ತು ಹಲವು ಸತ್ಕಾರ್ಯಗಳು ನಡೆಯಲೆಂದು ದೇವರು ಅವರಿಗೆ ದರುಶನ ನೀಡಲು ವಿಳಂಬ ಮಾಡುತ್ತಿದ್ದನು. ಇದರಿಂದ ಬೇಸತ್ತ ವಿಜಯದಾಸರು ಒಂದು ಕೃತಿಯನ್ನು ಒಂದು ಕಾಗದದಲ್ಲಿ ಬರೆದು ಗೋಪಾಲದಾಸರಿಗೆ ಕೊಟ್ಟರು. ಅದನ್ನು ತಿರುಪತಿಯ ತಿಮ್ಮಪ್ಪನ ರಥದ ಗಾಲಿಯ ಕೆಳಗಿಡುವಂತೆ ಹೇಳಿದರು. ಆಗ ರಥ ಎಳೆಯಲೇ ಆಗಲಿಲ್ಲ. ವಿಜಯದಾಸರೇ ಬಂದ ಮೇಲೆ ರಥ ಮುನ್ನಡೆಯಿತು.
೭೩ ನೇ ವಯಸ್ಸಿನಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆಯಲು ಚಿಪ್ಪಗಿರಿಗೆ ಆಗಮಿಸಿದರು. ಭಾಸ್ಕರ ಕ್ಷೇತ್ರ, ಸೂರ್ಯ ನಾರಾಯಣ ತಪಸ್ಸು ಮಾಡಿದ ಕ್ಷೇತ್ರ ಅದು. ಭೋಗೆಶ್ವರ ಅಲ್ಲಿನ ಭೂಮಿ ಒಡೆಯ. ಅವನಿಂದ ಅಪ್ಪಣೆ ಪಡೆದರು. ಅಲ್ಲಿನ ಭೋಗೆಶ್ವರ ದೇಗುಲದಲ್ಲಿಯೇ ವಿಜಯದಾಸರು "ಕೈಲಾಸವಾಸ ಗೌರೀಶ ಈಶ ..... " ಕ್ರತಿಯನ್ನು ರಚಿಸಿದ್ದಾರೆ.

ವಿಜಯದಾಸರು ಚಿಪ್ಪಗಿರಿಯಲ್ಲಿದ್ದ ಒಂದು ಸಣ್ಣ ನೀರಿನ ಕುಣಿಗೆ ಪ್ರತಿನಿತ್ಯ ಪ್ರದಕ್ಷಿಣೆ ಹಾಕುತ್ತಿದ್ದರು.
ಇದನ್ನು ನೋಡಿದ ಕುರುಬನೊಬ್ಬ "ಅಯ್ಯಾ .... ನೀವು ನನ್ನ ಕುರಿಯ ನೀರಿನ ಕುಣಿಗೇಕೆ ನಿತ್ಯ ಪ್ರದಕ್ಷಿಣೆ ಹಾಕುತ್ತಿರಿ? ಎಂದು ಕೇಳಿದನು". ಅದಕ್ಕೆ ದಾಸರು ಇದರಲ್ಲಿ ನಮ್ಮ ದೇವರಿದ್ದಾರೆ ಎಂದರು. ಅದಕ್ಕೆ ಆ ಕುರುಬನು "ನಮ್ಮ ತಾತ ಮುತ್ತಾತರ ಕಾಲದಿಂದ ಈ ಭೂಮಿ ನಮ್ಮದಾಗಿದೆ. ನಾವು ಎಂದೂ ಇಲ್ಲಿ ದೇವರನ್ನು ಕಂಡೇ ಇಲ್ಲ ಎಂದನು". ಆ ಕುಣಿಯನ್ನು ಅಗೆದು ನೋಡಿದರೆ "ವೇಣುಗೋಪಾಲನ ವಿಗ್ರಹ" ದೊರೆಯಿತು. ಅಚ್ಚರಿಗೆ ಒಳಗಾದ ಕುರುಬ ೨೨ ಎಕರೆ ಭೂಮಿಯನ್ನು ದಾಸರಿಗೆ ಅರ್ಪಿಸಿದನು.
ಒಮ್ಮೆ ವಿಜಯದಾಸರು ಶಿಷ್ಯ ಶೇಷದಾಸರ ಕನಸಿನಲ್ಲಿ ಬಂದು ತಮ್ಮ ದೇಹ ತ್ಯಾಗ ಮಾಡುವ ಸಂಕಲ್ಪದ ಬಗ್ಗೆ ಹೇಳಿದರು. ಕಾರ್ತಿಕ ಶುದ್ಧ ದಶಮಿ ದಿನದಂದು ದೇಹ ತ್ಯಾಗ ಮಾಡುವುದಾಗಿ, ಅವರ ಕಟ್ಟೆಯನ್ನು ಕಟ್ಟಿ ಅದರ ಮೇಲೆ ವೇಣುಗೋಪಾಲನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ತಿಳಿಸಿದರು. ಹೀಗೆ ತಮ್ಮ ಮೇಲೆ ಪರಮಾತ್ಮನ ಪೂಜಾ ಕೈಂಕರ್ಯಗಳು ನಡೆಯುವುದರಿಂದ ತಮಗೆ ಮುಕ್ತಿ ದೊರಕುತ್ತದೆ ಎಂಬುದು ಅವರ ಇಂಗಿತವಾಗಿತ್ತು. ಅವರ ಇಚ್ಚೆಯಂತೆ ಶೇಷದಾಸರು ಅವರ ಕಟ್ಟೆಯನ್ನು ಕಟ್ಟಿಸಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಇದಾದ ಕೆಲವು ದಿನಗಳಲ್ಲಿ ವಿಜಯದಾಸರು ಶೇಷದಾಸರ ಕನಸಿನಲ್ಲಿ ಬಂದು ತಮಗೆ ತಲೆ ಬೇನೆ ಶುರುವಾಗಿರುವುದಾಗಿ ಹೇಳಿದರು. ಕಾರಣ ವಿಚಾರಿಸಿದಾಗ, ಪರಮಾತ್ಮನ ಮೂರ್ತಿಗೆ ಮೇಲ್ಛಾವಣಿ ಇಲ್ಲದಿರುವುದೇ ಅವರ ಚಿಂತೆಗೆ ಕಾರಣವೆಂದರು. ಅದಕ್ಕಾಗಿ ಶೇಷದಾಸರು ವೇಣುಗೋಪಾಲನಿಗೆ ಛಾವಣಿಯನ್ನು ಬೃಂದಾವನ ಆಕಾರದಲ್ಲಿ ಕಟ್ಟಿಸಿದರು. ಚಿಪ್ಪಗಿರಿಯಲ್ಲಿ ವಿಜಯದಾಸರ ಕಟ್ಟೆ ಅದೇ ಮಾದರಿಯಲ್ಲಿ ನಿರ್ಮಿತವಾಗಿದೆ.
ವಿಜಯದಾಸರ ಸಾಕುಮಗನಾದ ಮೋಹನದಾಸರು "ನನಗೂ ನಿಮ್ಮ ಸೇವೆಯ ಅವಕಾಶ ಕೊಡಿ ಎಂದು ಕೇಳಿದಾಗ"...ವಿಜಯದಾಸರು "ನೀನು ನನ್ನ ಕಟ್ಟೆ ಕಾಯಿ ನಾನು ನಿನ್ನ ಹೊಟ್ಟೆ ಕಾಯುತ್ತೇನೆ" ಎಂದರು. ಈಗಲೂ ಮೋಹನದಾಸರ ವಂಶಸ್ಥರೇ ಚಿಪ್ಪಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೊ ಮಹಾರಾಯ
ಚಿಪ್ಪಗಿರಿಯಲ್ಲಿ ಮೋಹನದಾಸರ ವಂಶಸ್ಥರು ನಮಗೆ ವಿಜಯದಾಸರ ಬಗ್ಗೆ ತಿಳಿಸಿದ್ದಕ್ಕಾಗಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ವಿಜಯದಾಸರ ಬಗ್ಗೆ ನಾವು ಕೇಳಿ ತಿಳಿದಷ್ಟು ಮಾಹಿತಿಯನ್ನು ಇಲ್ಲಿ ವ್ಯಕ್ತಪಡಿಸಿದ್ದೇವೆ. ಬಹುಶಃ ಈ ಲೇಖನ ಅವರ ಜೀವನದ ಚಿಕ್ಕ ತುಣುಕಷ್ಟೇ. ಏನಾದರು ತಪ್ಪಿದ್ದಲ್ಲಿ ಕ್ಷಮಿಸಿ. ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಿಸ್ಸಂಕೋಚವಾಗಿ ತಿಳಿಸಿ.ಮನ್ನಿಸುವರೊ ಮಹಾರಾಯ