Thursday, June 30, 2016

Alarm

ಕತ್ತಲೆಯ ಕೊಣೆಯಲ್ಲಿ ತಲೆದಿಂಬಿನ ಅಡಿಯಿಂದ ಬೆಳಕು ಮತ್ತು ಶಬ್ದ ಒಟ್ಟಿಗೆ ಬಂದವು. ಬೆಳಕಿನ ವೇಗ ಶಬ್ದದ ವೇಗಕ್ಕಿಂತ ಜಾಸ್ತಿ ಅಂತ ಶಾಲೆಯಲ್ಲಿ ಓದಿದ‌ ನೆನಪು... alarm ಹೊಡೆದುಕೊಳ್ಳುವಾಗ ನಮ್ಮ ಬೆರಳು off button ಒತ್ತುವ ವೇಗ ಜಾಸ್ತಿ ಇದ್ದರೆ ಸಾಕು ಅನಿಸುತ್ತದೆ. :)
       Alarm off ಮಾಡಿದವಳೆ ಆಕೆ ಧಡಬಡಾಯಿಸಿ..ಮೆಟ್ಟಿಲಿನಿಂದ ಕೆಳಗೆ ಇಳಿದು ಬಂದಳು. ಸರಸರನೆ ಅಡುಗೆ ಮನೆ ದೀಪ ಹಚ್ಚಿ ನೀರು ತುಂಬಿಸಲು ಪಾತ್ರೆಗಳನ್ನೆಲ್ಲ ತೊಳೆದಳು. ಮುಂಬಾಗಿಲು ತೆರೆದು ನಲ್ಲಿ ತಿರುವಿದರೆ ಒಂದು ಹನಿ ನೀರೂ ಸಹ ತೊಟ್ಟಿಕ್ಕುತ್ತಿಲ್ಲ. ಗಾಬರಿಯಾಯಿತು...ಅಯ್ಯೊ ಕರ್ಮವೇ..ನಿನ್ನೆ newspaper ನಲ್ಲೇನಾದರೂ ನೀರಿನ ವ್ಯತ್ಯಯ ಅಂತ ಬಂದಿತ್ತೋ ಎನೋ...ಕೆಳಗಾದರೂ ಹೋಗಿ ನೋಡೋಣವೆಂದು ಧಾವಿಸಿದರು. ಸದಾ ಜನಸಂದಣಿ ಇರುವ ನಮ್ಮ ಬೀದಿ ಇಂದು ಏಕೋ ಬಿಕೋ ಅನ್ನುತ್ತಿರುವುದು ಕಂಡು ಆಶ್ಚರ್ಯವಾಯಿತಾದರೂ ಕಾರಣ ಯೋಚಿಸುವಷ್ಟು ...ಕಣ್ಣು ಅವಕಾಶ ಕೊಡಲಿಲ್ಲ...
          ಮೇಲೆ ಬಂದು ಗಡಿಯಾರ ನೋಡಿದರೆ ಸಮಯ ೧೨.೪೫. ಅಯ್ಯೊ ಈ ಗಡಿಯಾರಕ್ಕೆನಾಯ್ತು...ನಿಂತು ಹೋಗಿದೆ..ಅಂತ ಚಡಪಡಿಸಿ...ಆದದ್ದು ಆಗಲಿ..ಬೆಳಿಗ್ಗೆ tanker ತರಿಸಿ..ನೀರು ಹಾಕಿಸಿದರಾಯಿತು...ಸಧ್ಯ ಮಲಗಿದರೆ ಸಾಕು..ಅಂತ ಮುಸುಕು ಎಳೆದರು...ನಿದ್ದೆ ಹತ್ತಿದ್ದೆ ಗೊತ್ತಾಗಲಿಲ್ಲ.
         ಮತ್ತೆ ಕೆಲವು ಘಂಟೆಗಳಲ್ಲಿ ಕೊಣೆಯಲ್ಲಿ alarm ನ ನಾದ ಮೊಳಗಲಾರಂಭಿಸಿತು...ಆದರೆ ಈ ಸಲ ಬೇರೆ mobile ನಿಂದ. ಕಣ್ಣುಗಳನ್ನುಜ್ಜುತ್ತ...ಸಮಯ ನೋಡಿದರು..ನಮ್ಮ ಸೌಮ್ಯಾ ಮಾಮಿ. ನಿದ್ದೆ ಮಬ್ಬಿನಲ್ಲೂ ನಗು ತಡೆಯಲಾಗಲಿಲ್ಲ..
         ನಡುರಾತ್ರಿ ನಡೆದದ್ದು...ತ್ರಿವಿಕ್ರಮ ಹಿಂದಿನ ದಿನ ಮೊಬಿಲೆ ಕೆಳಗೆ  ಬಿಳಿಸಿದ್ದರ ಅವಾಂತರ. :)  mobile ನಲ್ಲಿ time reset ಆಗಿತ್ತು.  ನಿಗದಿತ ಸಮಯಕ್ಕಿಂತ ಮುಂಚೆ alarm ಹೊಡೆದು ಮಾಮಿಯನ್ನು ಪರದಾಡಿಸಿತು.

"Alarm ಸರಿಯಾದ ಸಮಯಕ್ಕೆ ಆದರೆ ಎಚ್ಚರಿಕೆಯ ಘಂಟೆ.. ಇಲ್ಲದಿದ್ದರೆ ಬೆಚ್ಚರಿಕೆಯ ಘಂಟೆ" :)


     

Friday, June 17, 2016

Prathama adhyaya

     ತ್ರಿವಿಕ್ರಮನಿಗೆ ನಾಳೆಗೆ ಒಂದು ಸಂವತ್ಸರ ತುಂಬುತ್ತದೆ. ಮಲಗಿರುವ ಅವನ ಮುದ್ದು ಮುಖ ನೋಡುತ್ತ ಮನಸ್ಸು ಒಂದು ವರ್ಷದ ಹಿಂದೆ ಜಾರಿತು.
      Normal delivery ಇಂದ c-section ಎಡೆಗೆ u-turn ತೊಗೊಂಡು ಬಿಟ್ಟಿದ್ದೆ. Anaesthesia ನೀಡಿದ ಆ doctor ಪ್ರತ್ಯಕ್ಷ ಧನ್ವಂತರಿ ಅಂತೆ ಗೋಚರಿಸಿದರು. ಕಳೆದ ೭ ಘಂಟೆಯಿಂದ ಕಾಣೆಯಾಗಿದ್ದ್ದ ನನ್ನ smile ಮರುಕಳಿಸಿತು. ಸರಿಯಾಗಿ ೭.೩೧ ಕ್ಕೆ ತ್ರಿವಿಕ್ರಮ ನಮ್ಮ ಪ್ರಪಂಚಕ್ಕೆ ಕಾಲಿಟ್ಟ. ವೈಧ್ಯರು ಮಗುವನ್ನು ನಮ್ಮ ಯೆಜಮಾನರ ಕೈಗೆ ಒಪ್ಪಿಸುವ ಮೊದಲು..ನನ್ನ ಕೆನ್ನೆಗೆ ಅವನ ಕೆನ್ನೆಯನ್ನು ಸವರಿದರು. ಆ ಕ್ಷಣ ಅನಿಸಿತು "ನಾವು ಅವನಿಗೆ ಜನ್ಮ ನೀಡಿದಂತೆ...ಅವನೂ ಓರ್ವ ತಂದೆ ತಾಯಿಗೆ ಜನ್ಮ ನೀಡಿದ್ದ" :)
        ಹೀಗೆ ಶುರು ಆಯ್ತು‌ ನೋಡಿ ನಮ್ಮ ಜೀವನದ ಸುಂದರ ಅಧ್ಯಾಯ. Reference ಗೆ ಇಡಿ avenue road ಜಾಲಾಡಿದರೂ ಯಾವ ಪುಸ್ತಕಗಳು ದೊರಕುವುದಿಲ್ಲ. ಸಹಾಯಕ್ಕೆ ಇರುವವರು seniors ಮಾತ್ರ. ಆದರೆ ಅನುಭವಿಗಳ ಅನುಭವಗಳು ವ್ಯಕ್ತಿಗತ ಅನ್ನುವ ಅರಿವು ಮೂಡಲು ಬಹಳ ಸಮಯ ಏನೂ ಬೇಕಾಗಲಿಲ್ಲ. Self study ನೆ best ಅನಿಸಿತು. ಯಾಕೆ ಅಂತ ಕೇಳ್ತಿರಾ?,..ನಮ್ಮ ಹಿರಿಯರ ಗಾದೆಗೆ ಹೊಸ ತುಣುಕನ್ನು‌ ಜೋಡಿಸಬಹುದೆನೋ ಅನಿಸುತ್ತೆ.."ಮನೆ ಕಟ್ಟಿ ನೋಡು..ಮದುವೆ ಮಾಡಿ ನೋಡು" ಇಷ್ಟೇ ಇದೆ.."ಮಗು ಮಾಡಿಕೊಂಡು ನೋಡು" ಅಂತ ಹಾಕಬಹುದು..:)
         ಪ್ರಪಂಚ ಅವನಿಗೆ ಎಷ್ಟು ಹೊಸದೊ..ಅವನ ಪ್ರಪಂಚ ನಮಗೂ ಅಷ್ಟೇ ಹೊಸದು. ಸಂಭಾಷಣೆಯ ಮಾಧ್ಯಮ ಹೃದಯ ಸ್ಪಂದನ ಒಂದೆ. ಮಗು ಪಾಪ ತನಗೆ ಎನೇ ತೊಂದರೆಯಾದರೂ ವ್ಯಕ್ತಪಡಿಸಲು ಅದಕ್ಕೆ ಇರುವ ಮಾರ್ಗ ಅಳು ಒಂದೇ...ಆವಾಗಾವಾಗ pitch ಹೆಚ್ಚು ಕಮ್ಮಿ ಆಗಬಹುದಷ್ಟೆ. ಪ್ರಾಯಶಃ ಮಗು ಹುಟ್ಟಿದ ಕ್ಷಣದಿಂದ ಅವನಿಗೆ ಮಾತು ಬರುವ ವರೆಗೂ ಅವನ ಅಳುವಿಗೆ ಕಾರಣ ಹುಡುಕುವುದೇ ದೊಡ್ಡ ಕೆಲಸ...ಮಗು ಈಡೀ ಪ್ರಪಂಚದ ಸಂಶೋಧನೆಯಲ್ಲಿದ್ದರೇ ನಾವು ಅವನ ಅಳುವಿನ ಸಂಶೋಧನೆಯಲ್ಲಿರುತ್ತೇವೆ.
       ನನಗಂತೂ‌ ಮೊದಮೊದಲು ಅವನು ಅತ್ತಾಗ ನನಗೂ‌ ಅಳು ಬರುತಿತ್ತು. ಅಳುವಿಗೆ ಕಾರಣ ತಿಳಿಯದ ಅಸಹಾಯಕತೆ ಒಂದೆಡೆ ಆದರೆ google results ನಂತೆ ಹತ್ತು‌ಹಲವು ಸಲಹೆಗಳು ಎಲ್ಲ ದಿಕ್ಕುಗಳಿಂದ ಬರುತ್ತಿರುತವೆ. ಹೇಗೊ ಅಡ್ಡೆಟು‌ ಮೇಲೆ ಗುಡ್ಡೆಟು ಹೊಡದು ಅವನು‌ ಸಮಾಧಾನ ಆದರೆ ಸಾಕು ಅನಿಸುತ್ತಿತ್ತು. ಇನ್ನೂ ಆ nurse ನನ್ನನ್ನ ward ಗೆ shift ಮಾಡಿದ‌ ಕ್ಷಣನೇ ಮಗುಗೆ‌ ಹಾಲುಣಿಸಿ ಅಂದಳು...ನಾನೇನೋ ಹತ್ತು ಮಕ್ಕಳನ್ನ ಹೆತ್ತು ಹನ್ನೊಂದನೇ ಹೆರಿಗೆಗೆ ಬಂದಿರುವ ತರಹ‌ ಇತ್ತು ಅವಳ ವರಸೆ. ತಲೆ ಅಲ್ಲಾಡಿಸದೆ ನನಗೂ ಬೇರೆ ದಾರಿ ಇರಲಿಲ್ಲ.
        ಅವನಿಗೆ sweater ಹಾಕಬೇಕೋ ಬೇಡವೋ ಅನ್ನುವುದು ದೊಡ್ಡ ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರ ತ್ರಿವಿಕ್ರಮನೇ ಕೊಟ್ಟ...ಅತಿಯಾದ ಬಟ್ಟೆಯಿಂದ ಅವನಿಗೆ dehydration ಆಗಿ ಜ್ವರ ಬಂದ ಕಾರಣ ...ವೈಧ್ಯರು normal ಬಟ್ಟೆ ಹಾಕಿ ಅಂದರು. ಅಬ್ಬಾ...ಆಗ ನನಗೆ ಜ್ಞಾನೋದಯವಾಯಿತು...ಹುಟ್ಟಿನಿಂದಲೇ ದೇವರು ಪ್ರತಿಯೊಬ್ಬರಿಗೂ ಅವರದೇ ಆದ ಮೈಗುಣಗಳನ್ನು ಹಾಕಿರ್ತಾನೆ...ಅದಕ್ಕೆ ತಕ್ಕಂತೆ ಬಟ್ಟೆ ಆಹಾರಗಳು ವಿಭಿನ್ನವಾಗಿರುತ್ತವೆ. ಈ ವಿಷಯ ಬಂದರೆ ಸಾಕು‌ ನನಗೂ ನಮ್ಮ ಅಜ್ಜಿಗೂ ದೊಡ್ಡ ಯುದ್ಧ. ಅದನ್ನ "ಅಂತ್ಯ ರಹಿತ ಯುದ್ಧ" ಅನ್ನಬಹುದು.
       ಅಳುವಿನಂತೆ ಇನ್ನೊಂದು debate ನ ವಸ್ತು ಅವನ ಕಕ್ಕಾ :) "ವಿಜು ಅವಾ ಇವತ್ತ ೬ ಸಲ ಮಾಡಿದ...ನೀ ತೊಪ್ಪಲ ಪಲ್ಯ ತಿಂದಿ..ಅದಕ್ಕ ಅವಾ ಹಂಗ ಇಶಿ ಮಾಡ್ಲಿಕತಾನ"... ಈ sentence ನ ಕೇಳದೆ ಇರೊ ಬಾಣಂತಿ ಈ ಪ್ರಪಂಚದಲ್ಲೇ ಇರ್ಲಿಕ್ಕಿಲ್ಲ. :) google ನಲ್ಲಿ search ಮಾಡಿದಾಗ ಗೊತ್ತಾಯ್ತು...ನನ್ನಂತೆ ಹಲವಾರು ಜನ ಈ ನಿರಾಧಾರ ಅಪವಾದವನ್ನ ಸುಳ್ಳೆಂದು prove ಮಾಡುವ ಪ್ರಯತ್ನದಲ್ಲಿರುವುದು. ವಾಸ್ತವವಾಗಿ...ಅದು ಆರೋಗ್ಯವಂತ ಮಗುವಿನ ಲಕ್ಷಣಗಳಲ್ಲೊಂದು. ಇನ್ನು‌ ಕಕ್ಕಾ ಬಟ್ಟೆ ಕಥೆ...ಅಬ್ಬಾ ಇವತ್ತಿನ quota ಮುಗಿಯಿತು ಅಂತ ನಿಟ್ಟುಸಿರು‌‌ ಬಿಡುವಷ್ಟರಲ್ಲಿ ...ಅಮ್ಮಾ ಇದೊಂದು ಅನ್ನುವಂತೆ ready ಆಗಿರ್ತಾನೆ ಮಗರಾಯ...ಹುಸಿ ಕೋಪದಿಂದ ಒಂದು ಚುರು‌ ಬೈದ್ರೆ..ಬೊಚ್ಚು ಬಾಯಿ ತೆಗೆದು ನಕ್ಕು ಬಿಡುತ್ತಾನೆ. ಆ ನಗುವೊಂದು ಸಾಕು...ಮತ್ತೆ soap brush ಹಿಡಿದು ಬಚ್ಚಲಮನೆಗೆ ಹೋಗೊಕೆ:) ಆಶ್ಚರ್ಯವೆಂದರೆ...ನಿರ್ವಿವಾದವಾಗಿ ಎಲ್ಲ ಕಂದಮ್ಮಗಳು shhh shhhh shhh ..ಅನ್ನೊ ರಾಗಕ್ಕೆ ಉಚ್ಚೆ ಹೊಯ್ಯುವುದು... ಇದರ ಒಳಗುಟ್ಟು‌ ಏನೋ ನಾ ಕಾಣೆ...
         ಈಗಷ್ಟೆ ಅಂಕುರಿಸಿರುವ ರುಚಿ ಮೊಗ್ಗುಗಳು ಸಾಮಾನ್ಯವೇನಲ್ಲ. ತರಹ ತರಹದ ಖಾದ್ಯಗಳನ್ನ ಮಾಡಿ ತಿನಿಸಬೇಕು. ಇಲ್ಲವಾದರೆ ತನ್ನದೆ ಆದ ಮುಖ ಭಂಗಿಯಿಂದ ಖಡಾಖಂಡಿತವಾಗಿ ನಿರಾಕರಿಸುತ್ತಾನೆ. ಅವನ ದೆಸೆಯಿಂದ ನಾನು ಹೊಸ ಹೊಸ ಅಡಿಗೆಗಳನ್ನ ಕಲಿಯುವಂತಾಗಿದೆ. :)
        ಅವನಿಗೆ ಚುಚ್ಚುಮದ್ದು ಕೊಡಿಸಬೇಕಾದರೆ ಚಡಪಡಿಸಿದ ನಾನು...ಅವನಿಗೆ ತಪ್ತಮುದ್ರಧಾರಣೆಗೆ ಕರೆದೊಯ್ಯುವ ಸಾಹಸ ಮಾಡಿದೆ. ನನಗೆ ಧೈರ್ಯವಿಲ್ಲದಿದ್ದರೂ ಗುರುಗಳ ಮೇಲಿನ ನಂಬಿಕೆ ಮತ್ತು ತ್ರಿವಿಕ್ರಮನ ಮನಸ್ಥೈರ್ಯ ನಂಬಿ ನಡೆದೆ. ಅವನು ಕಮಕ್ ಕಿಮಕ್ ಅನ್ನಲಿಲ್ಲ. ಆಗ ಅನಿಸಿತು ...ಅವನು ನಮ್ಮ ಅಂಶವೇ ಆದರೂ ನಮ್ಮಿಂದ ಸ್ವತಂತ್ರ.
        ಪ್ರಪಂಚದ ಅಣುಅಣುವಿನಲ್ಲೂ ಎನೋ ಹೊಸದನ್ನು ಕಾಣುವ ಅವನಿಗೆ...excitement ನಲ್ಲಿ ಎಡುವುದು ಬಿಳುವುದು ಸರ್ವೆಸಾಮಾನ್ಯ. ಒಂದು ಚಿಕ್ಕ bottle ಮುಚ್ಚಳ ತನಗೆ ಹಾಕಲು ಬಂದಾಗ ಎಲ್ಲಿಲ್ಲದ ಖುಷಿ ಅವನಿಗೆ. ಅವನ ಆಟಗಳನ್ನ ಆನಂದಿಸುತ್ತ..ಅವನ ಸ್ವಾತಂತ್ರ್ಯ ಕ್ಕೆ ಚ್ಯುತಿ ತರದೆ..ರಕ್ಷಿಸುವ ಹೊಣೆ ಮಾತ್ರ ನಮ್ಮದು.
       ಹೀಗೆ ಪ್ರತಿಯೊಂದು ಘಟ್ಟದಲ್ಲಿ ತನ್ನೊಂದಿಗೆ ನಮ್ಮನ್ನೂ ಬೆಳೆಸುತ್ತಿದ್ದಾನೆ. ಹಂತ ಹಂತದಲ್ಲಿ ನಮ್ಮ ತಾಳ್ಮೆ ಪರಿಕ್ಷೇ ಮಾಡ್ತಾನೆ. ಎಡಬಿಡದ ಅವನ ಗಲಾಟೆ ಇಂದ ನಾವು ಸುಸ್ತಾದರೂ ಅವನ energy ಹಾಗೇ ಇರುತ್ತದೆ.  ಒಂದು‌ ಹೆಣ್ಣು ತಾಯಿಯಾಗುವ ಪರಿಯೆ ಇದು ಎನಿಸುತ್ತದೆ. "ತಾಳ್ಮೆ ಇರುವವಳೇ ತಾಯಿ"...
ನಾವು ಅವನಿಗೆ ಜನ್ಮ ನೀಡಿದೆವು ಅನ್ನುವುದಕ್ಕಿಂತ ಅವನು ನಮಗೆ ಹೊಸ ಜನ್ಮ ನೀಡಿದನೆಂದು ಹೇಳಬಹುದು. :)