ಕೆಲವು ತಿಂಗಳುಗಳ ಹಿಂದೆ ಭಾಗವತ ಸಪ್ತಾಹದಲ್ಲಿ ಆಚಾರ್ಯರು ವೈರಾಗ್ಯದ ದಾರಿ ಯಾವುದು, ಅದನ್ನು ಸಾಧಿಸಿದ ಮಹಾನುಭಾವರ ಉದಾಹರಣೆಗಳನ್ನು ನೀಡುತ್ತಾ ವರ್ತಮಾನ ಜಗತ್ತು ವೈರಾಗ್ಯದ ಸಾಧನೆಗೆ ಕ್ರಮಿಸಬೇಕಾದ ದಾರಿಯ ಬಗೆಗೆಲ್ಲ ವಿವರಿಸಿದರು. ಅವರ ವಾಕ್ ಪ್ರೌಢಿಮೆಯಿಂದ ವಿಷಯವು ನಮ್ಮ ಮನ ಕಲುಕಿ "ವೈರಾಗ್ಯ"ದ ಬಗ್ಗೆ ವಿಚಾರ ವಿಶ್ಲೇಷಣೆ ಮಾಡುವಂತೆ ಮಾಡಿತು.
ದೈನಂದಿನ ಜೀವನದಲ್ಲಿ ಯಾರಾದರೂ ಯಾವುದಾದರೂ ವಿಷಯದಲ್ಲಿ ನಿರಾಸಕ್ತಿ ಹೊಂದಿದರೆ ಅದನ್ನೇ ನಾವು ವೈರಾಗ್ಯ ಬಂದಿದೆ ಅವರಿಗೆ ಎನ್ನುತ್ತೇವೆ ಅಥವಾ ಅದನ್ನೇ ತಮಾಷೆ ಮಾಡುತ್ತೇವೆ.
ಮೊನ್ನೆ ಹೀಗೆ ಮಾತು ಮಾತಲ್ಲಿ ನನ್ನ ನಮ್ಮ ಯಜಮಾನರ ಚರ್ಚೆ ವೈರಾಗ್ಯದೆಡೆಗೆ ಸಾಗಿತು. "ವೈರಾಗ್ಯ" ಎನ್ನುವುದು ನಮ್ಮ ಹಾಗೂ ಇನ್ನೊಂದು ವಸ್ತು ಅಥವಾ ಒಬ್ಬ ವ್ಯಕ್ತಿಯ ನಡುವಿನ ಸಂಬಂಧದ ಪರಾಕಾಷ್ಠತೆಯನ್ನು ವಿವರಿಸುತ್ತದೆ. ಮಂಜಿನ ಹನಿಯು ಎಲೆಯ ಮೇಲೆ ಇರುವಂತೆ ..... "ಇರಬೇಕು.. ಆದರೂ ಇಲ್ಲದಿರಬೇಕು " ಎಂಬಂತೆ!!!
ಪ್ರಸಕ್ತ ಆಧುನಿಕ ಬದುಕನ್ನು ಕೊಂಚ ಬಿಡಿಸಿ ನೋಡಿದರೆ ನಮಗರಿಯದಂತೆ ನಾವೇ ವೈರಾಗಿಗಳಾಗಿ ಬಿಟ್ಟಿದ್ದೇವೆನೋ ಎಂಬಂತೆ ಭಾಸವಾಗುತ್ತದೆ!!!
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಬಳಸುವವರಿಗೆ ಇದರ ಅನುಭವವಾಗಿರುತ್ತದೆ. ಹಣದ ವ್ಯಾಮೋಹವೇ ಇಲ್ಲವೇನೋವೆಂಬಂತೆ... ಸಾವಿರ, ಲಕ್ಷಗಟ್ಟಲೇ ಹಣ ಕ್ಷಣಾರ್ಧದಲ್ಲಿ ಖರ್ಚಾದರೂ ಯಾವುದೇ ಚಿಂತೆಯ ಒಂದು ಗೆರೆಯೂ ಮುಖದ ಮೇಲೆ ಮೂಡಿರುವುದಿಲ್ಲ. ನಿರ್ಲಿಪ್ತರಾಗಿರುತ್ತೀವಿ. ತಂತ್ರಜ್ಞಾನವೂ ನಮ್ಮನ್ನು ವೈರಾಗ್ಯದೆಡೆಗೆ ಕರೆದೊಯ್ಯುತ್ತಿದೆಯೋ ಎಂಬಂತೆ ನಮ್ಮ ಖಾತೆಯಿಂದ ಹಣ ಕಡಿತವಾಗುವ "ಕ್ಷಣಾರ್ಧದ" ಅವಧಿಯನ್ನು ಆದಷ್ಟು ನಿರ್ಲಕ್ಷಿಸುವಷ್ಟು ಮಟ್ಟಿಗೆ ತ್ವರಿತವಾಗಿ ಕಾರ್ಯ ನಿರ್ವಹಿಸುತ್ತದೆ. ಅದೇ ತರಕಾರಿಯವನಿಗೆ ೧೨ ರೂಪಾಯಿ ಚಿಲ್ಲರೆ ಎಣಿಸಿ ಕೊಡಬೇಕಾದರೆ ನೂರೆಂಟು ಚೌಕಾಸಿ ಮಾಡುತ್ತೇವೆ. ಇದರರ್ಥ ತಂತ್ರಜ್ಞಾನ ಒಂದು ರೀತಿಯಲ್ಲಿ ವೈರಾಗ್ಯದ ಮಾಧ್ಯಮವಾಗಿದೆ. :-)
ವೈರಾಗಿಯಾದವನಿಗೆ ಯಾವುದರ ಮೋಹವೂ ಸಲ್ಲದಂತೆ. ಬಹುಶಃ ಅದೇ ಕಾರಣವೇನೋ ಬಹುತೇಕ ಜನರಿಗೆ ತಾವು ತೊಡುವ ಬಟ್ಟೆಯ ಬಗ್ಗೆ ಅಷ್ಟು ನಿರ್ಲಕ್ಷತೆ ಇರುವುದು. ಮೇಲೆ ಹೇಳಿದಂತೆ ಹಣದ ವ್ಯಾಮೋಹವಂತೂ ಇಲ್ಲದಾಗಿದೆ..ಅದಕ್ಕೆ ಸಾವಿರಾರು ರೂಪಾಯಿ ಸುರಿದು ತುಂಡು ತುಂಡು ಬಟ್ಟೆ ಧರಿಸುತ್ತಾರೆ. ನಮ್ಮ ವಿಷ್ಣುವರ್ಧನ ಹಾಡಿನಂತೆ "ತುಂಡು ಬಟ್ಟೆ ಸಾಕು ಮಾನಾ ಮುಚ್ಚೋಕೆ "
ಇನ್ನೂ ಕೆಲವು ಕ್ಷಣಿಕ ವೈರಾಗ್ಯಗಳಿವೆ. ಪುರಾಣ ಕೇಳುವಷ್ಟು ಹೊತ್ತು ಇನ್ನೇನೂ ಮರುಕ್ಷಣನೇ ನಾವು ಎಲ್ಲವನ್ನೂ ತ್ಯಜಿಸಿ ಬಿಡುತ್ತಿವೇನೋ ಅಂದುಕೊಳ್ಳುವಷ್ಟರಲ್ಲಿ "ನಾನು ಪುರಾಣಕ್ಕೆ ಬರಬೇಕಾದರೆ ರಾಜಸ್ಥಾನಿ embroidery ಇದ್ದ ಕೆಂಪು ಬಣ್ಣದ ವೆಲ್ವೆಟ್ ಬಟ್ಟೆಯ bag ಒಂದನ್ನು ತಂದಿದ್ದೆನಲ್ಲ ...ಎಲ್ಲಿ ಹೋಯ್ತು " ಅಂತ ನಮ್ಮ ನಿಜರೂಪಕ್ಕೆ ಬರುತ್ತೇವೆ
ನಮ್ಮ ಆಪ್ತರಲ್ಲಿ ಯಾರಾದರೂ ಮೃತರಾದಾಗ ಅಥವಾ ವಾರ್ತೆಯಲ್ಲೋ ಇನ್ನೆಲ್ಲೋ ನಡೆದ ದುರ್ಘಟನೆಯ ಬಗ್ಗೆ ಕೇಳಿದಾಗ "ಜೀವನ ಇಷ್ಟೇ ... ನಮ್ಮ ಉಸಿರು ನಮ್ಮೊಡನೆ ಇದ್ದರೂ ಬಾಂಧವ್ಯ ಮುಕ್ತವಾಗಿರುತ್ತದೆ ". ಹೀಗೆ ಯೋಚಿಸುತ್ತ ಮಾರ್ಗ ಮಧ್ಯೆ ಒಂದು ಸೈಕಲ್ ನ ಹೊಡೆತದಿಂದ ತಪ್ಪಿಸಿಕೊಂಡರೂ "ಅಬ್ಬಾ ...ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರೆಳೆಯುತ್ತೇವೆ ".
. ಯಾವುದೇ ರೀತಿಯ ಅಭಾವದ ಸಮಯದಲ್ಲಿ ನಮ್ಮ ವೈರಾಗ್ಯ "ನರಿಯ ಹುಳಿ ದ್ರಾಕ್ಷಿಯ" ಕಥೆಯಂತಿರುತ್ತದೆ. ಅದೇ ಹೊಟ್ಟೆ ತುಂಬಿದಾಗ ಹುಳಿಯಲ್ಲದ ದ್ರಾಕ್ಷಿ ಎದುರಿಗಿದ್ದರೂ ಬೇಡವೆನಿಸಿ ಉದರ ವೈರಾಗಿಗಳಾಗುತ್ತೇವೆ.
ಪ್ರಸವದ ಸಮಯದಲ್ಲಿ ತಾಯಿಗೆ ಆ ಯಾತನೆ ತಾಳಲಾರದೆ "ಸಾಕಪ್ಪ ಈ ಜೀವನ" ಅನಿಸುತ್ತದೆ... ಮಗು ಜಗಕೆ ಬಂದ ಕ್ಷಣ "ಆಜ್ ಫಿರ್ ಜೀನೆ ಕಿ ತಮನ್ನಾ ಹೇ .... ಹಾಡು ನೆನಪಾಗುತ್ತದೆ " :) ಇದು "ವ್ಯಕ್ತಿ ವೈರಾಗ್ಯ"ಕ್ಕೆ ನಾಂದಿ ಹಾಡಾಗುತ್ತದೆ. ಇದಕ್ಕೆ ಪೂರಕವಾಗಿ ಕಂಡಕಂಡಲ್ಲಿ "day care center" ಗಳು ತಲೆ ಏಳುತ್ತಿವೆ. ಪ್ರತಿಯೊಬ್ಬರೂ ಯಂತ್ರಿಕ ಬದುಕಿನ ಓಟದಲ್ಲಿ ಪಾಲ್ಗೊಳ್ಳಲು ಹಸು ಕಂದಮ್ಮಗಳ ಲಾಲನೆ ಪಾಲನೆಗೆ ಇಂತಹ center ಗಳಿಗೆ ಮೊರೆಹೋಗುತ್ತಾರೆ.
ವಿಪರ್ಯಾಸವೆಂದರೆ ಕೆಲಸಕ್ಕೆ ಹೋಗುವ ಮಹಿಳೆಯೊಬ್ಬಳು "ನಾನು ಮಗುನ ಅಜ್ಜಿ ಮನೇಲಿ ಬಿಟ್ಟು office ಗೆ ಹೋಗುತ್ತೀನಿ ಅಂದರೆ" .... "ಅಜ್ಜಿ ಮನೆ" ಎನ್ನುವುದು ಒಂದು day care center ನ ಹೆಸರು ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. :-)
ಈ ಪ್ರಕ್ರಿಯೆಯಲ್ಲಿ ತಂದೆ ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯದ ಸರಪಳಿ ದುರ್ಬಲವಾಗುತ್ತದೆ. ತಾಯಿಯ ಹಾಲನ್ನೂ ಸಹ ಶೇಖರಿಸಿ ಮಗು ಅತ್ತಾಗ ಕುಡಿಸುವ ಕಾಲ ಬಂದಿರುವಾಗ ಆ ಮಗುವಿಗೆ ಆ ಶಿಶುಪ್ರಾಯದಿಂದಲೇ ವೈರಾಗ್ಯ ಬಂದು ಬಿಡುತ್ತದೆ. ಅದೇ ಕಾರಣವೋ ಏನೋ ತಂದೆ ತಾಯಿಗಳನ್ನು ವ್ರದ್ಧಾಶ್ರಮಕ್ಕೆ ಸಲೀಸಾಗಿ ಕಳುಹಿಸುತ್ತಾರೆ. ಇದನ್ನು ಪ್ರಾಯಶಃ ಸಾಂದರ್ಭಿಕ ವೈರಾಗ್ಯ ಎನ್ನಬಹುದು. :-)
"ಇದ್ದು ಇಲ್ಲದಂತಿರುವುದು" ಶಾಶ್ವತ ವೈರಾಗ್ಯವಾಗಿರಬೇಕು. ಸಂದರ್ಭಗಳ ಬವಣೆಯಲ್ಲಿ ತೊಳಲಾಡುತ್ತಿರುವ ನಮ್ಮಂತಹ ಸಾಮಾನ್ಯರು ಮಾನಸಿಕ ಗೊಂದಲದಲ್ಲಿ ಸಿಲುಕಿ ನಮ್ಮೊಳಗೆ ನಾವು
ಸೆಣಸಾಡುತ್ತಿದ್ದೇವೆ. ವೈರಾಗ್ಯದ ನಿಜ ಅರ್ಥವನ್ನೇ ಮರೆಮಾಚುವ ಇಂಥಹ ಋಣಾತ್ಮಕ ಬೆಳವಣಿಗೆಯಿಂದ ನೈಜ ವೈರಾಗ್ಯವನ್ನು ಸಾಧಿಸಲು ಎಮಗೆ "ಹರಿ ಸ್ಮರಣೆ" ಒಂದೇ ದಾರಿ ......
ಈ ವಿಶ್ಲೇಷಣೆ ಒಂದು ವಿಡಂಬನೆಯಷ್ಟೇ !!!! ವೈಯಕ್ತಿಕ ದೂಷಣೆಯಲ್ಲ...