Thursday, June 30, 2016

Alarm

ಕತ್ತಲೆಯ ಕೊಣೆಯಲ್ಲಿ ತಲೆದಿಂಬಿನ ಅಡಿಯಿಂದ ಬೆಳಕು ಮತ್ತು ಶಬ್ದ ಒಟ್ಟಿಗೆ ಬಂದವು. ಬೆಳಕಿನ ವೇಗ ಶಬ್ದದ ವೇಗಕ್ಕಿಂತ ಜಾಸ್ತಿ ಅಂತ ಶಾಲೆಯಲ್ಲಿ ಓದಿದ‌ ನೆನಪು... alarm ಹೊಡೆದುಕೊಳ್ಳುವಾಗ ನಮ್ಮ ಬೆರಳು off button ಒತ್ತುವ ವೇಗ ಜಾಸ್ತಿ ಇದ್ದರೆ ಸಾಕು ಅನಿಸುತ್ತದೆ. :)
       Alarm off ಮಾಡಿದವಳೆ ಆಕೆ ಧಡಬಡಾಯಿಸಿ..ಮೆಟ್ಟಿಲಿನಿಂದ ಕೆಳಗೆ ಇಳಿದು ಬಂದಳು. ಸರಸರನೆ ಅಡುಗೆ ಮನೆ ದೀಪ ಹಚ್ಚಿ ನೀರು ತುಂಬಿಸಲು ಪಾತ್ರೆಗಳನ್ನೆಲ್ಲ ತೊಳೆದಳು. ಮುಂಬಾಗಿಲು ತೆರೆದು ನಲ್ಲಿ ತಿರುವಿದರೆ ಒಂದು ಹನಿ ನೀರೂ ಸಹ ತೊಟ್ಟಿಕ್ಕುತ್ತಿಲ್ಲ. ಗಾಬರಿಯಾಯಿತು...ಅಯ್ಯೊ ಕರ್ಮವೇ..ನಿನ್ನೆ newspaper ನಲ್ಲೇನಾದರೂ ನೀರಿನ ವ್ಯತ್ಯಯ ಅಂತ ಬಂದಿತ್ತೋ ಎನೋ...ಕೆಳಗಾದರೂ ಹೋಗಿ ನೋಡೋಣವೆಂದು ಧಾವಿಸಿದರು. ಸದಾ ಜನಸಂದಣಿ ಇರುವ ನಮ್ಮ ಬೀದಿ ಇಂದು ಏಕೋ ಬಿಕೋ ಅನ್ನುತ್ತಿರುವುದು ಕಂಡು ಆಶ್ಚರ್ಯವಾಯಿತಾದರೂ ಕಾರಣ ಯೋಚಿಸುವಷ್ಟು ...ಕಣ್ಣು ಅವಕಾಶ ಕೊಡಲಿಲ್ಲ...
          ಮೇಲೆ ಬಂದು ಗಡಿಯಾರ ನೋಡಿದರೆ ಸಮಯ ೧೨.೪೫. ಅಯ್ಯೊ ಈ ಗಡಿಯಾರಕ್ಕೆನಾಯ್ತು...ನಿಂತು ಹೋಗಿದೆ..ಅಂತ ಚಡಪಡಿಸಿ...ಆದದ್ದು ಆಗಲಿ..ಬೆಳಿಗ್ಗೆ tanker ತರಿಸಿ..ನೀರು ಹಾಕಿಸಿದರಾಯಿತು...ಸಧ್ಯ ಮಲಗಿದರೆ ಸಾಕು..ಅಂತ ಮುಸುಕು ಎಳೆದರು...ನಿದ್ದೆ ಹತ್ತಿದ್ದೆ ಗೊತ್ತಾಗಲಿಲ್ಲ.
         ಮತ್ತೆ ಕೆಲವು ಘಂಟೆಗಳಲ್ಲಿ ಕೊಣೆಯಲ್ಲಿ alarm ನ ನಾದ ಮೊಳಗಲಾರಂಭಿಸಿತು...ಆದರೆ ಈ ಸಲ ಬೇರೆ mobile ನಿಂದ. ಕಣ್ಣುಗಳನ್ನುಜ್ಜುತ್ತ...ಸಮಯ ನೋಡಿದರು..ನಮ್ಮ ಸೌಮ್ಯಾ ಮಾಮಿ. ನಿದ್ದೆ ಮಬ್ಬಿನಲ್ಲೂ ನಗು ತಡೆಯಲಾಗಲಿಲ್ಲ..
         ನಡುರಾತ್ರಿ ನಡೆದದ್ದು...ತ್ರಿವಿಕ್ರಮ ಹಿಂದಿನ ದಿನ ಮೊಬಿಲೆ ಕೆಳಗೆ  ಬಿಳಿಸಿದ್ದರ ಅವಾಂತರ. :)  mobile ನಲ್ಲಿ time reset ಆಗಿತ್ತು.  ನಿಗದಿತ ಸಮಯಕ್ಕಿಂತ ಮುಂಚೆ alarm ಹೊಡೆದು ಮಾಮಿಯನ್ನು ಪರದಾಡಿಸಿತು.

"Alarm ಸರಿಯಾದ ಸಮಯಕ್ಕೆ ಆದರೆ ಎಚ್ಚರಿಕೆಯ ಘಂಟೆ.. ಇಲ್ಲದಿದ್ದರೆ ಬೆಚ್ಚರಿಕೆಯ ಘಂಟೆ" :)


     

2 comments: